ಉಡುಪಿ: ಉದ್ಯಮ ಕ್ಷೇತ್ರದಲ್ಲಿರುವ ಸಮಸ್ಯೆೆ ಮತ್ತು ಸವಾಲುಗಳಿಗೆ ಎದೆಗುಂದಬಾರದು. ಶಿಕ್ಷಣದ ಅನಂತರ ಕೇವಲ ಕೈ ತುಂಬಾ ಸಂಬಳ ಬರುವ ಉದ್ಯೋಗಗಳನ್ನಷ್ಟೇ ಅಪೇಕ್ಷೆ ಪಡದೆ, ಕಲಿಕೆಯ ಹಂತದಲ್ಲಿಯೇ ನೂರಾರು ಜನರಿಗೆ ಉದ್ಯೋಗ ನೀಡುವ ಉದ್ಯಮ ಕ್ಷೇತ್ರದ ಕಡೆಗೆ ಆಸಕ್ತಿಿ ವಹಿಸಿ ಯಶಸ್ಸನ್ನು ಸಾಧಿಸಬೇಕು ಎಂದು ಗ್ಲೋಬಲ್ ಸಾರಸ್ವತ್ ಚೇಂಬರ್ ಆಫ್ ಎಂಟ್ರಪ್ರನರ್ಸ್ ನಿರ್ದೇಶಕಿ, ಲೆಕ್ಕಪರಿಶೋಧಕಿ ಪ್ರತಿಕ್ಷಾ ಪೈ ನಾಯಕ್ ಹೇಳಿದರು.
ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ, ಮುದರಂಗಡಿ ಸಮರ್ಪಣಾ ಚಾರಿಟೆಬಲ್ ಟ್ರಸ್‌ಟ್ ಸಹಯೋಗದೊಂದಿಗೆ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಜರಗಿದ ವಿದ್ಯಾ ಪೋಷಕ್ ನಿಧಿ ವಿದ್ಯಾ ರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಗ್ಲೋೋಬಲ್ ಸಾರಸ್ವತ್ ಚೇಂಬರ್ ಆಫ್ ಎಂಟ್ರಪ್ರನರ್ಸ್ ಆಯೋಜನೆಯಲ್ಲಿ ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆ ಮತ್ತು ತ್ರಿಿಶಾ ಶೈಕ್ಷಣಿಕ ಸಮೂಹ ಸಂಸ್ಥೆೆಗಳ ಸಹಭಾಗಿತ್ವದಲ್ಲಿ ಪ್ರಥಮ ಹಂತದಲ್ಲಿ 25 ಮಂದಿ ಜಿಎಸ್‌ಬಿ ಯುವಜನತೆಗೆ ಉದ್ಯಮಶೀಲತೆಯ ಯೋಜನೆ, ಉತ್ಪಾದನೆ, ಮಾರ್ಕೆಟಿಂಗ್, ವೆಂಚರ್ ಕ್ಯಾಪಿಟಲ್, ಸಾಲ ಸೌಲಭ್ಯ ಮತ್ತು ಬ್ರಾಾಂಡಿಂಗ್ ಬಗ್ಗೆೆ ಐದು ದಿನಗಳ ಉಚಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅನಂತ ವೈದಿಕ ಕೇಂದ್ರದ ಪ್ರವರ್ತಕ ರಾಮಚಂದ್ರ ಅನಂತ ಭಟ್ ವಹಿಸಿದ್ದರು. ವಿದ್ಯಾಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರಯುತ ನಡವಳಿಕೆ, ಗುರು ಹಿರಿಯರಲ್ಲಿ ಶ್ರದ್ಧಾಾಭಕ್ತಿಿ, ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಿಯವಾಗಿ ಭಾಗವಹಿಸಬೇಕೆಂದು ಕಿವಿಮಾತು ಹೇಳಿದರು. ಮಂಗಳೂರಿನ ಕಾಮತ್ ವೆಂಚರ್ಸ್ ಸಂಸ್ಥಾಾಪಕ ಗುರುದತ್ತ ಕಾಮತ್, ಆಂದ್ರಪ್ರದೇಶ ನಂದ್ಯಾಾಲದ ಜಿಎಸ್‌ಬಿ ಸಮಾಜದ ಸಂಚಾಲಕ ರಘುವೀರ್ ಶೆಣೈ ನಂದ್ಯಾಲ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜಿಎಸ್‌ಬಿ ಸಮಾಜದ ಹಿತರಕ್ಷಣಾ ವೇದಿಕೆಯ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳ ಬಗ್ಗೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾ ಪೋಷಕ ನಿಧಿ ವಿದ್ಯಾಾರ್ಥಿ ವೇತನ ಯೋಜನೆಯ ಅಧ್ಯಕ್ಷ ಎಸ್.ಎಸ್.ನಾಯಕ್, ಜಿ ಎಸ್ ಬಿ ವೇದಿಕೆ ಅಧ್ಯಕ್ಷ ಜಿ. ಸತೀಶ್ ಹೆಗ್ಡೆೆ ಕೋಟ , ಸಂಯೋಜಕ ಆರ್. ವಿವೇಕಾನಂದ ಶೆಣೈ ಸ್ವಾಗತಿಸಿದರು , ಪ್ರ. ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ನಿರೂಪಿಸಿದರು.