Saturday, July 20, 2024
Homeರಾಜ್ಯನಿರಂತರ 100% ಫಲಿತಾಂಶ, ರಾಜ್ಯಕ್ಕೆ ಮೊದಲ ಸ್ಥಾನ-ಮುಖ್ಯಮಂತ್ರಿ ಗೌರವಕ್ಕೆ ಪಾತ್ರರಾದ ಪ್ರವೀಣ್ ಪೂಜಾರಿ ಪಣಪಿಲ

ನಿರಂತರ 100% ಫಲಿತಾಂಶ, ರಾಜ್ಯಕ್ಕೆ ಮೊದಲ ಸ್ಥಾನ-ಮುಖ್ಯಮಂತ್ರಿ ಗೌರವಕ್ಕೆ ಪಾತ್ರರಾದ ಪ್ರವೀಣ್ ಪೂಜಾರಿ ಪಣಪಿಲ

ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ಪ್ರತಿಭಾ ಪುರಸ್ಕಾರ 2024 ಸಾಧಕ ಉಪನ್ಯಾಸಕ ಪ್ರಶಸ್ತಿಗೆ ಮೂಡುಬಿದಿರೆಯ ಪಣಪಿಲ ಗ್ರಾಮದ ಪ್ರವೀಣ್ ಪೂಜಾರಿ ಇವರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೆನ್ನಬೆಟ್ಟು ಕಮ್ಮಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇಲ್ಲಿನ ಪಿಯುಸಿ ಇಂಗ್ಲಿಷ್ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಶೇಕಡ 100 ಫಲಿತಾಂಶ ಬಂದಿದ್ದು ಮತ್ತು ಶೇಕಡ 89.89 ಸರಾಸರಿ ಫಲಿತಾಂಶವನ್ನು ತಂದು ರಾಜ್ಯದ ಪ್ರಥಮ ಶಿಕ್ಷಕ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ
ಮೊರಾರ್ಜಿ ದೇಸಾಯಿ ವಸತಿ ಶಾಲೆ ಮೆನ್ನಬೆಟ್ಟು ಕಮ್ಮಾಜಿ ಇದು ಸತತವಾಗಿ ಏಳನೇ ಬಾರಿ 100% ಫಲಿತಾಂಶ ಸಾಧನೆಯನ್ನು ಮಾಡಿದೆ. ಪ್ರವೀಣ್ ಪೂಜಾರಿ ಪಣಪಿಲ ಇವರು ಸತತ ಮೂರು ವರ್ಷಗಳಿಂದ ತನ್ನ ಇಂಗ್ಲಿಷ್ ವಿಷಯದಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ತಂದು ಕೊಟ್ಟಿದ್ದು ಶಿಕ್ಷಣ ಸಂಸ್ಥೆಗಳ ಸಾಧಕರ ಕಾಲೇಜುಗಳಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ.

ಈ ನಿಮಿತ್ತ ಬೆಂಗಳೂರಿನಲ್ಲಿ ನಡೆದ 2023-24ನೇ ಸಾಲಿನ ಬೆಸ್ಟ್‌ ಲೆಕ್ಚರ್ ಅವಾರ್ಡ್ ಕಾರ್ಯಕ್ರಮದ ಮುಖ್ಯಮಂತ್ರಿ ಗೌರವ ಅಭಿನಂದನೆಗೆ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯವರು ಬೆಂಗಳೂರಿನ ಅಂಬೇಡ್ಕ‌ರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ವಿತರಿಸಿದರು
ಪ್ರವೀಣ್‌ ಪೂಜಾರಿಯವರು ಇಂಗ್ಲಿಷ್ ವಿಷಯದ ಉಪನ್ಯಾಸದ ಜೊತೆಗೆ ಎನ್.ಸಿ.ಸಿ. ಅಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಸೋಸಿಯೇಷನ್ ಎನ್.ಸಿ.ಸಿ. ಆಫೀಸರ್ 18ನೇ ಕರ್ನಾಟಕ ಬ್ಯಾಚ್ ಮಂಗಳೂರು ಇದರ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

RELATED ARTICLES
- Advertisment -
Google search engine

Most Popular