ಗುರುಪುರ ಡಿಸೆಂಬರ್ 14ರಂದು ಗುರುಪುರ ಕೈಕಂಬದಲ್ಲಿ ನಡೆಯಲಿರುವ ಪ್ರಾಂತ್ಯ ಅಧ್ಯಕ್ಷರ ಅಧಿಕೃತ ಭೇಟಿ ಹಾಗೂ ವಲಯ ಅಧ್ಯಕ್ಷರ ಭೇಟಿ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಗುರುಪುರ ಕೈಕಂಬದ ಜೋಸೆಫ್ ವಾಲ್ಟರ್ ಪ್ಯಾರಿಸ್ ರವರ ನಿವಾಸದಲ್ಲಿ ಜರಗಿತು ಹಾಗೂ ಲಯನ್ಸ್ ಕ್ಲಬ್ ಗುರುಪುರ ಕೈಕಂಬದ ನವಂಬರ್ ತಿಂಗಳ ಸಭೆಯೂ ಜರಗಿತು ಗುರುಪುರ ಕೈಕಂಬದ ಅಧ್ಯಕ್ಷರಾದ ಮಹೇಶ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಬಂದಂತಹ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಈ ಸಭೆಯಲ್ಲಿ ಪ್ರಾಂತ್ಯಾಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಮಾತನಾಡಿ ಗುರುಪುರ ಕೈಕಂಬದ ಸೇವಾ ಕಾರ್ಯಕ್ರಮಗಳನ್ನು ಪ್ರಸಂಶಿಸಿ ಹುರಿದುoಬಿಸಿದರು, ಪ್ರತಿಭಾ ಹೆಬ್ಬಾರ್, ವಲಯಾಧ್ಯಕ್ಷ ರೋಷನ್ ಡಿ’ಸೋಜ, ಮುರಳೀಧರ್ ಉಪಸ್ಥಿತರಿದ್ದರು. ಗುರುಪುರ ಕೈಕಂಬ ಕ್ಲಬ್ ನ ಅಧ್ಯಕ್ಷ ಮಹೇಶ್ ಶೆಟ್ಟಿ, ಕೋಶಾಧಿಕಾರಿ ಆ್ಯರನ್ ಫೆರ್ನಾಂಡೀಸ್, ವಲಯದೂತ ಮೆಲ್ವಿನ್ ಸಲ್ಡಾನ, ವಾಲ್ಟರ್ ಪೆರಿಸ್, ಆನಂದ್ ಕೆ.ಸಿಂಧೂರ್, ಜೆಫ್ರಿಯನ್ ತಾವ್ರೊ, ಜೇಮ್ಸ್ ಮೆಂಡ, ಪ್ರದೀಪ್ ಸಲ್ಡಾನ, ಜೇಸನ್ ಪೆರಿಸ್ ಭಾಗವಹಿಸಿದ್ದರು.ಕೋಶಾಧಿಕಾರಿ ಆ್ಯರನ್ ಫೆರ್ನಾಂಡೀಸ್ ವಂದನೆಯನ್ನು ಸಲ್ಲಿಸಿದರು.
ಪ್ರಾಂತ್ಯ ಅಧ್ಯಕ್ಷರ ಬೇಟಿ ಕಾರ್ಯಕ್ರಮದ ಪೂರ್ವಭಾವಿ ಸಭೆ
RELATED ARTICLES