ಕ್ರೀಡಾ ಸಾಧಕಿ ಪ್ರೀತಿ ಬಸನಗೌಡ ಬಿರಾದಾರ್ ಅವರಿಗೆ ಪ್ರಶಸ್ತಿ
ಹೆಬ್ರಿ : ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಜನವರಿ 10 ರಿಂದ 12 ರ ತನಕ ನಡೆದ “ಫಸ್ಟ್ ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್ ಶಿಪ್ 2025” ರಲ್ಲಿ ಕ್ರೀಡಾ ಸಾಧಕಿ ಪ್ರೀತಿ ಬಸನಗೌಡ ಬಿರಾದಾರ 4×400ಮೀಟರ್ ರೀಲೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿಯ ಪದಕಕ್ಕೆ ಭಾಜನರಾಗಿದ್ದಾರೆ. 5 ಸಾವಿರ ಮೀಟರ್ ವಾಕ್ ರೇಸ್ ನಲ್ಲಿ 4ನೇ ಸ್ಥಾನವನ್ನು ಪಡೆದು ಸಾಧನೆಯನ್ನು ಮೆರೆದಿದ್ದಾರೆ.
ಶ್ರೀಲಂಕಾ, ಪಶ್ಚಿಮ ಬಂಗಾಳ, ,ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕೇರಳದ ಸಾಧಕ ಕ್ರೀಡಾಪಟುಗಳು “ಫಸ್ಟ್ ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್ ಶಿಪ್ 2025” ರಲ್ಲಿ ಭಾಗವಹಿಸಿದ್ದರು.
ಪ್ರಸ್ತುತ ಹೆಬ್ರಿಯಲ್ಲಿರುವ ಪ್ರೀತಿ ಬಸನಗೌಡ ಬಿರಾದಾರ ಎಳೆವೆಯಿಂದಲೇ ಕ್ರೀಡೆಯಲ್ಲಿ ಅತ್ಯಂತ ಆಸಕ್ತಿಯನ್ನು ಹೊಂದಿದ್ದು. ಪ್ರತಿ ಗುಂಪು ಆಟಗಳಲ್ಲಿಯು ಕ್ಯಾಪ್ಟನ್ ಆಗಿ ನಿರಂತರ ಗೆಲುವು ಸಾಧಿಸುತ್ತಿದ್ದರು. ಪ್ರಾಥಮಿಕ ಶಾಲಾ ಹಂತದ ಕ್ರೀಡೆಯಲ್ಲಿ 100,200 ಮೀಟರ್ ಓಟದಲ್ಲಿ ಸದಾ ಪ್ರಥಮ ಸ್ಥಾನವನ್ನೇ ಪಡೆಯುತ್ತಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ “ವಯಕ್ತಿಕ ವೀರಾಗೃಣಿ” ಪ್ರಶಸ್ತಿಗೆ ಪಾತ್ರರಾಗಿದ್ದರು.
ಪ್ರೌಢಶಾಲಾ ಹಂತದಲ್ಲಿಯು ವಯಕ್ತಿಕ ಹಾಗೂ ಗುಂಪು ಆಟಗಳನ್ನು ರಾಜ್ಯಮಟ್ಟಕ್ಕೆ ತೆಗೆದುಕೊಂಡು ಹೋಗಿರುತ್ತಾರೆ. ಸೆಕೆಂಡ್ ಸೌತ್ ಇಂಡಿಯಾ ಮಾಸ್ಟರ್ ಅಥ್ಲೆಟಿಕ್ ಓಪನ್ ಚಾಂಪಿಯನ್ ಶಿಪ್ 2024ರಲ್ಲಿ ಭಾಗವಹಿಸಿ 4×400 ಮೀಟರ್ ರೀಲೆಯಲ್ಲಿ ದ್ವಿತೀಯ ಸ್ಥಾನವನ್ನು ಹಾಗೂ 100 ಮೀಟರ್ ಓಟದಲ್ಲಿ ತೃತೀಯ ಸ್ಥಾನವನ್ನು ಹಾಗೂ 200 ಮೀಟರ್ ಓಟದಲ್ಲಿ ೬ನೇ ಸ್ಥಾನವನ್ನು ಪಡೆದು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.