Thursday, July 25, 2024
Homeರಾಜ್ಯವರ್ಲ್ಡ್ ಬುಕ್​ ಆಫ್ ರೆಕಾರ್ಡ್ ಸೇರಿದ ಪ್ರೆಸಿಡೆನ್ಸಿ ಯೂನಿವರ್ಸಿಟಿ ವಿದ್ಯಾರ್ಥಿಗಳು 

ವರ್ಲ್ಡ್ ಬುಕ್​ ಆಫ್ ರೆಕಾರ್ಡ್ ಸೇರಿದ ಪ್ರೆಸಿಡೆನ್ಸಿ ಯೂನಿವರ್ಸಿಟಿ ವಿದ್ಯಾರ್ಥಿಗಳು 

ಬೆಂಗಳೂರು : ಯಲಹಂಕದ ಬಳಿ ಇರುವ ಪ್ರತಿಷ್ಠಿತ ಪ್ರೆಸಿಡೆನ್ಸಿ ಯೂನಿವರ್ಸಿಟಿ ವಿದ್ಯಾರ್ಥಿಗಳು ಮತ್ತೊಮ್ಮೆ ಹೊಸ ದಾಖಲೆ ಬರೆದಿದ್ದಾರೆ. ಹೊಸ ಹೊಸ ಆವಿಷ್ಕಾರದೊಂದಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸೇರಿದ್ದಾರೆ. ಬರೋಬ್ಬರಿ 5000 ಸಾವಿರ ವಿದ್ಯಾರ್ಥಿಗಳಿಂದ ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಹೊಸ ಆವಿಷ್ಕಾರ ಮಾಡಿದ್ದಾರೆ. ಬರೋಬ್ಬರಿ 900 ಹೊಸ ಪ್ರೊಜೆಕ್ಟ್ಸ್ ಮಂಡಿಸಿದ್ದಾರೆ. ಇವತ್ತು ಕಾಲೇಜ್ ಕ್ಯಾಂಪಸ್​ನಲ್ಲಿ ಅದರ ಎಕ್ಸ್ ಪೋ ನಡೆಸಲಾಯ್ತು.

ಇನ್ನು ಎಕ್ಸ್ ಪೋದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಫುಲ್ ಖುಷಿಯಾದರು. ನಾವು ರೈತರಿಗೆ ಅನುಕೂಲವಾಗಲು ಮಣ್ಣು ಇಲ್ಲದೆ ಟೊಮೋಟೊ ಸಸಿಗಳನ್ನು ಬೆಳೆಯುವುದರ ಬಗ್ಗೆ ಆವಿಷ್ಕಾರ ಮಾಡಿದ್ದೇವೆ ಎಂದು ವಿದ್ಯಾರ್ಥಿನಿ ಮೋನಿಷಾ ಹೇಳಿದರು.

ಎಕ್ಸ್​ಪೋಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಟೀಮ್​ನವರು ಬಂದಿದ್ದರು. ಇದೇ ವೇಳೆ ಹೊಸ ಹೊಸ ಸ್ವರೂಪದ ರೋಬೋಟ್, ಡ್ರೋನ್, ಅಗ್ರಿಕಲ್ಚರ್ ಯಂತ್ರೋಪಕರಣಗಳನ್ನು ವಿದ್ಯಾರ್ಥಿಗಳು ಡಿಸ್ಪ್ಲೇ ಮಾಡಿ ತೋರಿಸಿದರು. ಕಳೆದ ಬಾರಿ ಸುಮಾರು 550 ಪ್ರಾಜೆಕ್ಟ್ಸ್ ಮಾಡಿ ಇದೇ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದ ವಿದ್ಯಾರ್ಥಿಗಳು ಇವತ್ತು ತಮ್ಮ ದಾಖಲೆಯನ್ನ ಅದೇ ಕಾಲೇಜ್ ವಿದ್ಯಾರ್ಥಿಗಳು ಬ್ರೇಕ್ ಮಾಡಿದರು. ಇದು ಸಾಕಷ್ಟು ಸಂತಸ ಮೂಡಿಸಿದೆ ಎಂದು ಇನ್ನೋವೇಟಿವ್ ಪ್ರಾಜೆಕ್ಟ್ ಮುಖ್ಯಸ್ಥೆ ಡಾ.ದಿವ್ಯಾ ರಾಣಿ ಹೇಳಿದರು.

ಒಟ್ಟಿನಲ್ಲಿ ಇವತ್ತು ಪ್ರೆಸಿಡೆನ್ಸಿ ಕಾಲೇಜ್ ನ ವಿದ್ಯಾರ್ಥಿಗಳು ತಮ್ಮ ಇನೋವೇಟಿವ್ ಟ್ಯಾಲೆಂಟ್​ನಿಂದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಇವರ ಸಾಧನೆ ಮತ್ತಷ್ಟು ಅಗಾದವಾಗಲಿ.

RELATED ARTICLES
- Advertisment -
Google search engine

Most Popular