Saturday, June 14, 2025
Homeಮುಲ್ಕಿಮುಲ್ಕಿ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ವಿಠಲ ಕೆ ಅಮೀನ್ ನಿಧನ

ಮುಲ್ಕಿ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ವಿಠಲ ಕೆ ಅಮೀನ್ ನಿಧನ

ಮುಲ್ಕಿ : ಮುಲ್ಕಿಯ ಹರಿಹರ ಕ್ಷೇತ್ರದ ಬಳಿಯ ನಿವಾಸಿ ವಿಠಲ ಕೆ ಅಮೀನ್(87) ರವರು ಸೋಮವಾರ ರಾತ್ರಿ ನಿಧನರಾದರು. ಅವರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಟಾಟಾ ಕನ್ಸಲ್ಟೆನ್ಸಿ ಯಲ್ಲಿ ಮುಂಬಯಿ ಯಲ್ಲಿ ಉದ್ಯೋಗಿಯಾಗಿದ್ದ ಅವರು ನಿವೃತ್ತಿ ಬಳಿಕ ವ್ಯವಹಾರವನ್ನು ನಡೆಸುತ್ತಿದ್ದರು. ಮುಲ್ಕಿ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರಾಗಿ, ಕೊಡುಗೈ ದಾನಿಯಾಗಿ, ಪ್ರತಿಷ್ಠಿತ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಸಹಿತ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.

ಅವರ ನಿಧನಕ್ಕೆ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ವೇ.ಮೂ. ವಾದಿರಾಜ ಉಪಾಧ್ಯಾಯ ಕೊಲಕಾಡಿ, ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಶಾಸಕ ಉಮಾನಾಥ ಕೋಟ್ಯಾನ್,ಮಾಜೀ ಸಚಿವ ಅಭಯಚಂದ್ರ ಜೈನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು,ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ ಮಾಜೀ ಅಧ್ಯಕ್ಷ ಗೋಪಿನಾಥ ಪಡಂಗ, ಪದಾಧಿಕಾರಿಗಳಾದ ಕಮಲಾಕ್ಷ ಬಡಗುಹಿತ್ಲು, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು, ಮುಲ್ಕಿ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಡಾ. ಹರೀಶ್ಚಂದ್ರ ಪಿ ಸಾಲ್ಯಾನ್, ಮುಲ್ಕಿ ನ.ಪಂ ಮಾಜೀ ಅಧ್ಯಕ್ಷರಾದ ಸುನಿಲ್ ಆಳ್ವ, ಸುಭಾಶ್ ಶೆಟ್ಟಿ, ಸದಸ್ಯರಾದ ಸತೀಶ್ ಅಂಚನ್, ಹರ್ಷರಾಜ ಶೆಟ್ಟಿ, ಪುತ್ತು ಬಾವ,ಯೋಗೀಶ್ ಕೋಟ್ಯಾನ್ ಬಾಲಚಂದ್ರ ಕಾಮತ್, ಮಾಜೀ ಸದಸ್ಯ ಉಮೇಶ್ ಮಾನಂಪಾಡಿ, ಬಿರುವೆರ್ ಕುಡ್ಲ ಮುಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್ ಮುಲ್ಕಿ ವಿಜಯ ರೈತ ಸೇವಾ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ ಬೆರ್ನಾಡ್, ಉದ್ಯಮಿ ವಾಸು ಪೂಜಾರಿ ಚಿತ್ರಾಪು, ಸತೀಶ್ ಕಿಲ್ಪಾಡಿ, ಧನಂಜಯ ಮಟ್ಟು ನಿವೃತ್ತ ಉಪನ್ಯಾಸಕ ವೈ ಎನ್ ಸಾಲ್ಯಾನ್, ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್,ಶಂಕರ್ ಪಡಂಗ, ಅತಿಕಾರಿಬೆಟ್ಟು ಗ್ರಾ.ಪಂ ಸದಸ್ಯ ದಯಾನಂದ ಮಟ್ಟು, ಉದಯಕುಮಾರ್ ಶೆಟ್ಟಿ ಆದಿಧನ್ ಮುಲ್ಕಿ ಕಿಶೋರ್ ಶೆಟ್ಟಿ ಬಪ್ಪನಾಡು ಮುಲ್ಕಿ ಪ್ರೆಸ್ ಕ್ಲಬ್ ಅಧ್ಯಕ್ಷ ನಿಶಾಂತ್ ಶೆಟ್ಟಿ, ಸದಸ್ಯರಾದ ಹರೀಶ್ ಹೆಜ್ಮಾಡಿ , ಪುನೀತ್ ಕೃಷ್ಣ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular