ಮಡಂತ್ಯಾರ್ :- ದ. ಕ ಜಿಲ್ಲೆಯ ಪ್ರತಿಷ್ಠಿತ ರೋಟರಿ ಕ್ಲಬ್ ಗಳಲ್ಲಿ ಒಂದಾದ ರೋಟರಿ ಕ್ಲಬ್ ಮಡಂತ್ಯಾರ್ ಗೆ ಇತ್ತೀಚಿಗೆ ಮೈಸೂರು ನಲ್ಲಿ ನಡೆದ ಸಮ್ಮೇಳನ ದಲ್ಲಿ ಅಂತರಾಷ್ಟ್ರೀಯ ಪ್ಲಾಟಿನಂ ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಸಕ್ತ ಸಾಲಿನಲ್ಲಿ ಮಡಂತ್ಯಾರ್ ಕ್ಲಬ್ ಜಿಲ್ಲೆಯಲ್ಲೇ ಮಾದರಿ ಕಾರ್ಯಕ್ರಮ ಗಳಾದ ನಮ್ಮ ನಡೆ ಆರ್ಥಿಕ ಸಾಕ್ಷಾರತೆ ಯ ಕಡೆಗೆ ಹಾಗೂ ಇತರ 180 ಕ್ಕೂ ಅಧಿಕ ಸಾರ್ವಜನಿಕ ರಿಗೆ ಬಹುಉಪಯೋಗ ವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಇದರಿಂದಾಗಿ ಕ್ಲಬ್ ನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪ್ಲಾಟಿನಂ ಪ್ರಶಸ್ತಿ ಬಂದಿರುತ್ತದೆ.
ಪ್ರಸಕ್ತ ಸಾಲಿನ ಕ್ಲಬ್ ನ ಸೇವಾಚಟುವಟಿಕೆ ಗಳನ್ನು ಆಧಾರಿಸಿ ಕೊಡಮಾಡುವ ಅತ್ಯುನ್ನತ ಗೌರವ ಕ್ಕೆ ಪಾತ್ರರಾದ ಕ್ಲಬ್ ನ ಪರವಾಗಿ ಕ್ಲಬ್ ನ ಅಧ್ಯಕ್ಷರಾದ ಶ್ರೀ ಪೇಜಾವರ ಶ್ರೀಧರ ರಾವ್ ಇವರು ಜಿಲ್ಲಾ ಗೌವರ್ನರ್ ಆದ ಶ್ರೀ ಹೆಚ್. ಆರ್.ಕೇಶವ ರವರಿಂದ ಗೌರವವನ್ನು ಸ್ವೀಕರಿಸಿದರು.
ಕ್ಲಬ್ ನ ಸಹಕಾರ್ಯದರ್ಶಿಯವರಾದ ಆದಿತ್ಯ ಎಸ್ ರಾವ್ ಮತ್ತು ಇತರ ಸದಸ್ಯರು ಹಾಜರಿದ್ದರು.