ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರ್ ರವರು 2-4-2024ನೇ ಮಂಗಳವಾರದಂದು ಮೂಡಬಿದ್ರೆ ಘಟಕಕ್ಕೆ ಭೇಟಿ ನೀಡಿ ಮುಂಬರುವ 2024 ರ ಚುನಾವಣೆಯಲ್ಲಿ ಪೋಲಿಸ್ ಇಲಾಖೆ ಜೊತೆ ಗೃಹರಕ್ಷಕರು ಸೇರಿ ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ನ್ಯಾಯಯುತವಾಗಿ ಕಾನೂನು ಬದ್ಧವಾಗಿ ಮತ್ತು ನಡೆಸಲು ಬದ್ದರಾಗಿರಬೇಕು ಎಂದು ಕರೆ ನೀಡಿದರು. ಈ ಹಿನ್ನಲೆಯಲ್ಲಿ ಗೃಹರಕ್ಷಕರಿಗೆ ಚುನಾವಣಾ ಕರ್ತವ್ಯ ಅತ್ಯಂತ ಮಹತ್ವದ್ದಾಗಿರುತ್ತದೆ. ಎಲ್ಲಾ ಗೃಹರಕ್ಷಕರು ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕರಿಸಬೇಕು. ಹಾಗೂ ದೀರ್ಘ ಕಾಲ ಗೈರು ಹಾಜರಾದ ಗೃಹರಕ್ಷಕರನ್ನು ಮನವೊಲಿಸಿ ಚುನಾವಣೆಗೆ ನಿಯೋಜಿಸುವಂತೆ ಘಟಕಾಧಿಕಾರಿಗಳಿಗೆ ತಿಳಿಸಿದರು. ಪ್ರತಿಯೊಬ್ಬ ಗೃಹರಕ್ಷಕರು ಅಂಚೆ ಮೂಲಕ ಮತದಾನ ಮಾಡಲು ಚುನಾವಣಾ ಗುರುತಿನ ಚೀಟಿಯನ್ನು ಮತ್ತು ಭಾಗ ಸಂಖ್ಯೆಯನ್ನು ಘಟಕಾಧಿಕಾರಿಯವರಲ್ಲಿ ನೀಡುವಂತೆ ಆದೇಶಿಸಿದರು. ಹಾಗೂ ಪ್ರತಿಯೊಬ್ಬ ಗೃಹರಕ್ಷಕರು ಹಾಗೂ ಅವರ ಮನೆಯವರು ಮತದಾನವನ್ನು ಕಡ್ಡಾಯವಾಗಿ ಮಾಡಬೇಕೇಂದು ತಿಳಿಸಿದರು. ಪ್ರಜಾಫ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ಎಲ್ಲರೂ ಪ್ರಜ್ಞಾಪೂರ್ವಕ ವಾಗಿ ತೊಡಗಿಸಿಕೊಳ್ಳಲು ಗೃಹರಕ್ಷಕರಿಗೆ ವಿನಂತಿ ಮಾಡಿದರು. ಈ ಸಂದರ್ಭದಲ್ಲಿ ಉಳ್ಳಾಲ ಘಟಕದ ಘಟಕಾಧಿಕಾರಿ ಸುನೀಲ್ , ಗೃಹರಕ್ಷಕರಾದ ಸಂಜಯ್,ಜೀವನ್ ಉಪಸ್ಥಿತರಿದ್ದರು. ಮೂಡಬಿದ್ರೆ ಘಟಕಾಧಿಕಾರಿ ಪಾಂಡಿರಾಜ್, ಲಾರೆನ್ಸ್, ಈರಪ್ಪ, ಬೂಬ ಕುಮಾರ್ ಚಂದ್ರಶೇಖರ ಹಾಗೂ 25 ಗೃಹರಕ್ಷಕ, ಗೃಹರಕ್ಷಕಿಯರು ಹಾಜರಿದ್ದರು.