Monday, December 2, 2024
HomeUncategorizedವಿದ್ಯಾಭಾರತಿ ಕರ್ನಾಟಕ ಆಯೋಜಿಸುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಪ್ರೀತಮ್ ಕೆ.ಪಿ. ಆಯ್ಕೆ

ವಿದ್ಯಾಭಾರತಿ ಕರ್ನಾಟಕ ಆಯೋಜಿಸುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಪ್ರೀತಮ್ ಕೆ.ಪಿ. ಆಯ್ಕೆ

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಜಿಲ್ಲಾಮಟ್ಟದ ವಿಜ್ಞಾನ ಮೇಳದಲ್ಲಿ ಅಮೃತ ಭಾರತಿ ವಿದ್ಯಾಲಯ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನವನ್ನು ಪಡೆದರು.

ಬಾಲ ವರ್ಗ ವೇದಗಣಿತ ರಸಪ್ರಶ್ನೆ ಆತ್ರೇಯ ಹೆಬ್ಬಾರ್, ವಿನಾಯಕ ಪ್ರಭು. ಪ್ರೀತಮ್ ಎನ್ ರಾವ್ ಪ್ರಥಮ ಸ್ಥಾನವನ್ನು . ಜಿಲ್ಲಾಮಟ್ಟದಲ್ಲಿ ಇನ್ನೋವೆಟಿವ್ ಮಾಡೆಲ್ ಸ್ಪರ್ಧೆಯಲ್ಲಿ ಶ್ರವಂತ್, ವರ್ಷಿತ್,ಶ್ರೇಯಾ , ಸಾತ್ವಿಕ, ತೃತೀಯ ಸ್ಥಾನ. ಅನೀಶ್, ಪ್ರಜೇಶ್ ವಾದಿರಾಜ ದ್ವಿತೀಯ ಸ್ಥಾನ ಪಡೆದರು.

ಜಿಲ್ಲಾ ಮಟ್ಟದ ವೇದ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಆಕಾಶ, ಆಶಿತಾ, ಪ್ರಿಯಾಂಕ ಪಡೆದರು.

ಕಿಶೋರ್ ವರ್ಗದ ಜಿಲ್ಲಾಮಟ್ಟ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ರಚಿತ, ಪೂರ್ವಿ, ಯತೀಶ್ ಪ್ರಥಮ ಸ್ಥಾನವನ್ನು ಪಡೆದರು.

ಗಣಿತ , ವಿಜ್ಞಾನ ಎಕ್ಸ್ಪರಿಮೆಂಟ್ ಮತ್ತು ಮಾಡೆಲ್ ಸ್ಪರ್ಧೆಯಲ್ಲಿ ಅನ್ವಿತಾ , ಎಂಜಲ್ , ಪ್ರೀತಮ್ ಕೆ.ಪಿ. ಪ್ರಥಮ ಸ್ಥಾನ ಪಡೆದರು.

ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ಸುರಭಿ , ಪುಷ್ಕರ್ , ಪ್ರಣಮ್ಯ. ಪ್ರಥಮ ಸ್ಥಾನ.ಆಶುಭಾಷಣ ಸ್ಪರ್ಧೆಯಲ್ಲಿ ಲಾವಣ್ಯ ಪ್ರಥಮ ಸ್ಥಾನ.

ವಿದ್ಯಾ ಭಾರತಿ ಕರ್ನಾಟಕ ಪ್ರಾಂತದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅಮೃತ ಭಾರತಿ ವಿದ್ಯಾಲಯದ ಕುಮಾರಿ ಲಾವಣ್ಯ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ..ವಿದ್ಯಾರ್ಥಿ ಪ್ರೀತಮ್ ಕೆ.ಪಿ.ಸೈನ್ಸ್ ಮಾಡೆಲ್ ಬೆಸ್ಡ್ ಆನ್ ಸೆನ್ಸರ್ ರಚಿಸಿ ಪ್ರಥಮ ಸ್ಥಾನ ಪಡೆದು ವಿದ್ಯಾಭಾರತಿ ಕ್ಷೇತ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ‌ ಪಡೆದು ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಆಯೋಜಿಸುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಸ್ಪರ್ಧಿಸಲು ಅರ್ಹತೆ ಪಡೆದರು. ನವಂಬರ್ 16ರಂದು ನಡೆಯುವ ಸ್ಪರ್ಧೆಗೆ ಭಾಗವಹಿಸಲಿದ್ದಾರೆ.ಇವರಿಗೆ ಅಮೃತ ಭಾರತಿ ಟ್ರಸ್ಟ್ ಮತ್ತು ಬೋಧಕ ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular