ಪಡುಬಿದ್ರಿ: ತನ್ನದೇ ಮಗಳು ಹಾಗೂ ಆಕೆಯ ಪ್ರಿಯಕರನ ಖಾಸಗಿ ವಿಡಿಯೊಗಳನ್ನು ತಂದೆಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಘಟನೆ ನಡೆದಿದೆ. ತಂದೆಯ ಈ ಹೀನ ಕೃತ್ಯದಿಂದ ಮನನೊಂದ ಮಗಳು ಆತ್ಮಹತ್ಯೆಗೆ ಯತ್ನಿಸಿ ಈಗ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದೆ. ಮಗಳ ಖಾಸಗಿ ವಿಡಿಯೊ ಹರಿಬಿಟ್ಟ ಆರೋಪದಲ್ಲಿ ತಂದೆ ಆಸಿಫ್ ಯಾನೆ ಆಸಿಫ್ ಆಪದ್ಭಾಂದವನ ವಿರುದ್ಧ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಂಚಿನಡ್ಕದ ನಿವಾಸಿ ಆಸಿಫ್ ಎಂಬಾತನ ಮಗಳು ಹಾಗೂ ತೀರ್ಥಹಳ್ಳಿಯ ಅವರ ಸಂಬಂಧಿ ತೌಸೀಫ್ ಪ್ರೀತಿಸುತ್ತಿದ್ದರು. ಇದು ಆಸಿಫ್‌ಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಆಸಿಫ್ ತನ್ನ ಮಗಳ ಪ್ರಿಯಕರ ತೌಸೀಫ್‌ನನ್ನು ಮನೆಗೆ ಕರೆಸಿಕೊಂಡು ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಆತ ಹಾಗೂ ತನ್ನ ಮಗಳ ಫೋನ್‌ಗಳನ್ನು ಕಸಿದುಕೊಂಡು ಅದರಲ್ಲಿದ್ದ ವಿಡಿಯೊಗಳನ್ನು ತನ್ನ ಫೋನ್‌ಗೆ ವರ್ಗಾಯಿಸಿಕೊಂಡು ಅವುಗಳನ್ನು ವಿವಿಧ ವಾಟ್ಸಾಪ್ ಗುಂಪುಗಳಿಗೆ ರವಾನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ವಿಷಯಕ್ಕೆ ಸಂಬಂಧಿಸಿ ಪತ್ನಿ ಹಾಗೂ ಮಗಳಿಗೂ ಈತ ಹಲ್ಲೆ ನಡೆಸಿದ್ದು, ಮನನೊಂದ ಮಗಳು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪತ್ನಿ ಉಡುಪಿ ಸೆನ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ.