ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ ಬೆಂಗಳೂರು ಇದರ ಆಶ್ರಯದಲ್ಲಿ ಡಿ.8 ರಂದು ಅಂತರ್ ಕೆ.ಐ.ಸಿ.ಎಂ ತರಬೇತಿ ಸಂಸ್ಥೆಗಳ ಶಿಕ್ಷಣಾರ್ಥಿಗಳಿಗೆ ನಡೆದ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಕೆಐಸಿಎಂ ತರಬೇತಿ ಸಂಸ್ಥೆಯ ಶಿಕ್ಷಣಾರ್ಥಿಗಳು ಮೊದಲನೆಯ ಬಹುಮಾನ ಪಡೆಯುವುದರ ಜೊತೆಗೆ ಪರ್ಯಾಯ ಪಾರಿತೋಷಕವನ್ನು ಪಡೆದಿರುತ್ತಾರೆ.
“ಸಹಕಾರ ಸಂಸ್ಥೆಗಳಲ್ಲಿ ಸಂಶೋಧನೆ, ಅನ್ವೇಷಣೆ, ಉತ್ತಮ ಆಡಳಿತಕ್ಕೆ ಆದ್ಯತೆ ನೀಡಿದರೆ ಮಾತ್ರವೇ ಸಹಕಾರಿ ಚಳವಳಿ ಬಲಗೊಳ್ಳುವುದು” ಎಂಬ ವಿಷಯದಲ್ಲಿ ಪರ್ಯಾಯ ಪಾರಿತೋಷಕವನ್ನು ಗಳಿಸಿದ ದೀಕ್ಷಾ ಮತ್ತು ಕಾವ್ಯ ಶಿಕ್ಷಣಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು.
ಮೂಡುಬಿದಿರೆಯ ಕೆಐಸಿಎಂ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಬಹುಮಾನ ಮತ್ತು ಪರ್ಯಾಯ ಪಾರಿತೋಷಕ”
RELATED ARTICLES