ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ, ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಪಡುಪಣಂಬೂರು ತಾಲೂಕು ಮತ್ತು ಜಿಲ್ಲಾ ಯುವ ಜನ ಒಕ್ಕೂಟ, ದ.ಕ.ಜಿಲ್ಲೆ ಇವರುಗಳ ಮಾರ್ಗದರ್ಶನದಲ್ಲಿ ಜಿಲ್ಲಾ, ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.) ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿ| ಜವಾಹರಲಾಲ್ ನೆಹರು ಅವರ ಜನ್ಮದಿನಾಚರಣೆಯ ಗೌರವಾರ್ಥ ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳ ಹಬ್ಬ-2024 ಹಾಗೂ ಮಕ್ಕಳ ಕ್ರೀಡಾಕೂಟದ ಬಹುಮಾನ ವಿತರಣೆ ಕಾರ್ಯಕ್ರಮವು ದಿನಾಂಕ: 17.11.2024 ನೇ ಆದಿತ್ಯವಾರ ಬೆಳಿಗ್ಗೆ 9.00 ರಿಂದ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಲಿರುವುದು.
ದೀಪ ಪ್ರಜ್ವಲನೆಯನ್ನು ಅಣ್ಣಪ್ಪ ದೇವಾಡಿಗ (ಅಧ್ಯಕ್ಷರು, ದೇವಾಡಿಗರ ಸಂಘ (ರಿ.), ಪಾವಂಜೆ)ಯನ್ನು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ರಶ್ಮಿ ಕಿರಣ್ (ಪ್ರಾಂಶುಪಾಲರು ರೇಸ್ ಮಾಂಟೆಸ್ಸರಿ ಹೌಸ್ ಆಫ್ ಚೈಲ್ಡ್ರೆನ್,ಕುಳಾಯಿ) ವಹಿಸಲಿದ್ದಾರೆ.
ಬಹುಮಾನ ವಿತರಣೆಯನ್ನು ಕಿರಣ್ ಕುಮಾರ್ (ಮಾಲಕರು, ಎಸ್.ಕೆ.ಅಲ್ಯೂಮಿನಿಯಂ, ಪಕ್ಷಿಕೆರೆ)ಮಾಡಲಿದ್ದಾರೆ.
.