ಮೊಗ್ರು :ಮೊಗ್ರು ಗ್ರಾಮದ ಮುಗೇರಡ್ಕ ಅಲೆಕ್ಕಿ ಜೈ ಶ್ರೀ ರಾಮ ಶಿಶುಮಂದಿರ (ರಿ.) ಇದರ ಆಶ್ರಯ ದಲ್ಲಿ ನಡೆದ ರೀಲ್ಸ್ ರಂಗೋಲಿ ಸ್ಪರ್ಧೆಯ ವಿಜೇತರಿಗೆ ನವೆಂಬರ್ 26 ರಂದು ಶಿಶುಮಂದಿರದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನೆರವೇರಿತು.
10 ತೀರ್ಪುಗಾರರ ತೀರ್ಪುಗಾರಿಕೆಯ ಆಧಾರದಲ್ಲಿ ಎಲ್ಲರ ಸಮ್ಮುಖದಲ್ಲಿ ವಿಜೇತರನ್ನು ಘೋಷಣೆ ಮಾಡಲಾಯಿತು.
ಕಡಬ ತಾಲೂಕು ಬರೆಂಬೆಟ್ಟು ,ಹಳೇನೇರೆಂಕಿ ನಿವಾಸಿ ನವ್ಯಾ.ವಿ.ಬಿ ಪ್ರಥಮ ಹಾಗೂ ಇಳಂತಿಲ ಪಿದಮಲೆ ನಿವಾಸಿ ಶಿಲ್ಪಾ ದ್ವಿತೀಯ ಬಹುಮಾನ ಪಡೆದುಕೊಂಡರು.ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರಿಗೂ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಮೇಶ್ ಗೌಡ ನೆಕ್ಕರಾಜೆ, ವರುಣ್ ನೆಕ್ಕರಾಜೆ, ಮಾತಾಜಿ ಪುಷ್ಪಲತಾ, ಮಾತಾಜಿ ಗೀತಾ, ಮಾತಾಜಿ ನವ್ಯ ಉಪಸ್ಥಿತರಿದ್ದರು.
ಮೊಗ್ರು ಗ್ರಾಮದ ಮುಗೇರಡ್ಕ ಅಲೆಕ್ಕಿ ಜೈ ಶ್ರೀ ರಾಮ ಶಿಶುಮಂದಿರ (ರಿ.) ಇದರ ಆಶ್ರಯದಲ್ಲಿ ನಡೆದ ರೀಲ್ಸ್ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ.
RELATED ARTICLES