spot_img
30.6 C
Udupi
Monday, September 25, 2023
spot_img
spot_img
Home Uncategorised Annual Membership for tulunaduvarthe

Annual Membership for tulunaduvarthe

 500.00

Category:

Description

ಪೂರ್ವದಲ್ಲಿ ಹಸುರಿನ ಸಮೃದ್ಧವಾದ ಪಶ್ಚಿಮಘಟ್ಟ, ಪಶ್ಚಿಮದಲ್ಲಿ ನೀಲ ಪಡುವಣದ ಕಡಲು, ಇದರ ಮಧ್ಯದಲ್ಲಿ ಗೋಕರ್ಣದಿಂದ ಚಂದ್ರಗಿರಿ ಹೊಳೆಯವರೆಗೆ ಇಂದಿಗೂ ಯಾವುದೇ ಪ್ರಕೃತಿ ವಿಕೋಪಗಳಿಗೆ ಸಿಲುಕದ ಅತೀ ಸುಂದರವಾದ ಕರ್ನಾಟಕದ ಹೆಬ್ಬಾಗಿಲು ಈ ನಮ್ಮ ತುಳುನಾಡು, ವಿಭಿನ್ನವಾದ ಆಚಾರ-ವಿಚಾರಗಳು, ಜೀವನ ಶೈಲಿ, ಸಂಸ್ಕೃತಿ, ಭಾಷೆಗಳಿಂದ ತನ್ನದೇ ಆದ ಶ್ರೀಮಂತಿಕೆಯನ್ನೊಳಗೊಂಡು ಭವ್ಯ ಭಾರತದ ಅಭಿವೃದ್ಧಿಯಲ್ಲಿ ಅದೆಷ್ಟೋ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆಧುನಿಕ ಕಾಲ ಘಟ್ಟದಲ್ಲಿ ಪರಭಾಷಾ ವ್ಯಾಮೋಹ, ಆಧುನಿಕತೆಯ ಸೊಬಗು, ತಂತ್ರಜ್ಞಾನದ ಮೊರೆಹೊಕ್ಕ ನಾವು ಇಂದು ನಮ್ಮ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದೇವೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತೀಯೊಬ್ಬ ತುಳುವರದ್ದಾಗಿದೆ. ಈ ಉದ್ದೇಶವನ್ನು ಧೈಯವಾಗಿಸಿಕೊಂಡು ನಾವಿಂದು ಭಾರತ ಸರಕಾರದಿಂದ ಮಾನ್ಯತೆ ಪಡೆದು ತುಳುನಾಡು ವಾರ್ತೆ ಎಂಬ
ಹೆಸರಿನ ವಾರ ಪತ್ರಿಕೆಯ ಮೂಲಕ ತುಳುನಾಡಿನ ಸಂಪೂರ್ಣ
ಚಿತ್ರಣವನ್ನು ನಿಮ್ಮ ಮನೆ ಬಾಗಿಲಿಗೆ ಮುಟ್ಟಿಸುವ ಪ್ರಯತ್ನ ನಮ್ಮದಾಗಿದೆ. ನಮ್ಮ ವಾರ ಪತ್ರಿಕೆಯು ರಾಜಕೀಯ, ಸಾಮಾಜಿಕ, ಸ್ಥಳೀಯ ಸುದ್ದಿಗಳನ್ನು ಮಾತ್ರ ಹೊಂದಿರದೆ ವಿಭಿನ್ನವಾಗಿ ನಮ್ಮ ನಾಡಿನ ಹಬ್ಬಗಳು, ಆಚರಣೆಗಳು, ದೇವಾಲಯಗಳು, ದೈವಾರಾದನೆ, ಜ್ಯೋತಿಷ್ಯ, ಇತಿಹಾಸ, ತುಳು ರಂಗಭೂಮಿ, ಪರವೂರಿನ ತುಳುವರ ಸುದ್ದಿಗಳು, ಮಹಿಳಾ ಸಂಪದ, ತುಳುನಾಡ ಸಾಧಕರು, ಮನೆ ಮದ್ದು, ತುಳುವರ ರುಚಿಕರ, ಮನೋರಂಜನೆ, ತುಳು ಲಿಪಿಯ ಬರವಣಿಗೆಯ ಜ್ಞಾನ ಇನ್ನೂ ಅನೇಕ ವಿಚಾರಗಳನ್ನು ಹೊಂದಿದೆ.

ನಮ್ಮ ಪತ್ರಿಕೆಯು ಕನ್ನಡದಲ್ಲಿ ಪ್ರಸರಣಗೊಳ್ಳಲಿದ್ದು, ಕೌಟುಂಬಿಕವಾಗಿ ಎಲ್ಲರ ಅಭಿರುಚಿಗಳಿಗೆ ಅನುಗುಣವಾಗಿದೆ. ತುಳುನಾಡು ಮತ್ತು ಭಾಷಾ ಅಭಿಮಾನಿಗಳಾದ ತಾವೆಲ್ಲರೂ ನಮ್ಮ ನಾಡಿನ ಸಂಸ್ಕೃತಿಯನ್ನು ಬೆಳೆಸಲು ನಮ್ಮೊಂದಿಗೆ ಕೈಜೋಡಿಸಬೇಕಾಗಿ ಕೇಳಿಕೊಳ್ಳುತ್ತೇವೆ.

ನಮ್ಮ ವಾರ ಪತ್ರಿಕೆಗೆ ವಾರ್ಷಿಕ ಚಂದಾದಾರರಾಗಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ

Reviews

There are no reviews yet.

Be the first to review “Annual Membership for tulunaduvarthe”

Your email address will not be published. Required fields are marked *