Saturday, December 14, 2024
HomeUncategorizedಮೂರು ತಿಂಗಳಿನಿಂದ ಕಿರುಕುಳದ ಆರೋಪ; ಕಾಲೇಜಿನಲ್ಲೇ ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ

ಮೂರು ತಿಂಗಳಿನಿಂದ ಕಿರುಕುಳದ ಆರೋಪ; ಕಾಲೇಜಿನಲ್ಲೇ ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಕಾಲೇಜಿನಲ್ಲೇ ಮಾತ್ರೆ ಸೇವಿಸಿ ಪ್ರಾಧ್ಯಾಪಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಗರದ ಎಸ್​ಎಸ್​ಎಂಆರ್​ವಿ ಪದವಿ ಕಾಲೇಜಿನಲ್ಲಿ ಘಟನೆ ನಡೆದಿದೆ. ಶಬಾನಾ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಾಧ್ಯಾಪಕಿ. ಪ್ರಾಂಶುಪಾಲರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಅಸ್ವಸ್ಥಗೊಂಡ ಪ್ರಾಧ್ಯಾಪಕಿ ಶಬಾನಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತಿಲಕ್ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಪ್ರಾಧ್ಯಾಪಕಿ ಶಬಾನಾ ಪ್ರತಿಕ್ರಿಯಿಸಿದ್ದು, ಬ್ಲ್ಯಾಕ್​ ಮ್ಯಾಜಿಕ್ ಮಾಡುತ್ತಾಳೆ ಅಂತಾ ಯಾರು ಮಾತಾಡಲ್ಲ. ಕಾಲೇಜಿನಲ್ಲಿ ಅವಿನಾಶ್, ಶಾಂತಿ ಕೃಷ್ಣ, ಸ್ಮಿತಾ, ನರೇಶ್ ಕಳೆದ ಮೂರು ತಿಂಗಳಿನಿಂದ ತುಂಬಾ ಕಿರುಕುಳ ಕೊಡುತ್ತಿದ್ದಾರೆ. ಕೆಲಸಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡುತ್ತಾರೆ. ಇದರಿಂದ ನನ್ನ ಪರ್ಸನಲ್ ಲೈಫ್​ಗೂ ಸಮಸ್ಯೆ ಆಗುತ್ತಿದೆ. ಅದಕ್ಕೆ ತುಂಬಾ ಬೇಜಾರ್​ ಆಗಿ ಸಾಯುವ ನಿರ್ಧಾರಕ್ಕೆ ಬಂದೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular