Monday, January 20, 2025
Homeಬಂಟ್ವಾಳಪೆರಾಜೆ ಗುತ್ತು ಚಾವಡಿಯ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ

ಪೆರಾಜೆ ಗುತ್ತು ಚಾವಡಿಯ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ

ಬಂಟ್ವಾಳ: ಪೆರಾಜೆ ಗ್ರಾಮದ ಅರಸುದೈವ ಗುಡ್ಡ ಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ ಮಲೆ ಕೊರತಿ ದೈವಗಳ ಪೆರಾಜೆ ಗುತ್ತು ಚಾವಡಿಯ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರವನ್ನು ಇತ್ತಿಚೆಗೆ ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು..
ಈ ಶುಭ ಸಂದರ್ಭದಲ್ಲಿ ಪೆರಾಜೆಗುತ್ತು ಶ್ರೀಕಾಂತ ಆಳ್ವ,ಜಯರಾಮ್ ರೈ,ಡಾ.ಶ್ರೀನಾಥ್ ಆಳ್ವ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕುಶಲ ಎಂ.ಪೆರಾಜೆ,ಕಾರ್ಯಾಧ್ಯಕ್ಷರಾದ ಜನಾರ್ಧನ ಪಾಳ್ಯ, ಕೋಶಾಧಿಕಾರಿ ಕೃಷ್ಣಗೌಡ, ಗೌರವಾದ್ಯಕ್ಷರಾದ ಸಚ್ಚಿದಾನಂದ ರೈ,ಶಾಂತಪ್ಪ ಕುಲಾಲ್, ಉಪಾಧ್ಯಕ್ಷರಾದ ಹರೀಶ್ ರೈ,ರವೀಂದ್ರ ರೈ,ಶ್ರೀನಿವಾಸ್ ಪೂಜಾರಿ,ಕಾರ್ಯದರ್ಶಿಗಳಾದ ಸಂಜೀವ ಸಾದಿಕುಕ್ಕು ಮತ್ತು ಪದಾಧಿಕಾರಿಗಳಾದ ರಾಜಾರಾಮ್ ಭಟ್,ಬಾಬು ಪೂಜಾರಿ,ರಾಮಣ್ಣ ಕುಡೋಳು,ಜನಾರ್ದನ ಗೌಡ,ಲಕ್ಷ್ಮೀಶ, ಚಂದಪ್ಪ ನಾಯ್ಕ,ಸುಂದರ ಬಂಗೇರ,ಮೋನಪ್ಪ ಸಾಲ್ಯಾನ್, ಸುಂದರ ಗೌಡ,ಉಮೇಶ್, ತಿಮ್ಮಪ್ಪ ಗೌಡ,ನಾರಾಯಣ ನಾಯ್ಕ್,ಶರತ್ ಪೆರಾಜೆ,ಬಾಲಕೃಷ್ಣ ಕುಡೋಳು, ಕುಶಾಲಪ್ಪ ಅಲುಂಬುಡ,ತೇಜ ಸುಂದರ್,ನಾರಾಯಣ ಪಾಳ್ಯ, ಜನಾರ್ದನ ಏನಾಜೆ, ಪ್ರದೀಪ್ ಮಡಲ, ದೇವಸ್ಥಾನದ ಅರ್ಚಕರು
ಮತ್ತು ದೈವ ಚಾಕಿರಿಯವರು ಹಾಗೂ ದೈವಸ್ಥಾನಕ್ಕೆ ಸಂಬಂಧ ಪಟ್ಟ ಮನೆತನದವರು, ಊರ ಪ್ರಮುಖರು, ಪೆರಾಜೆ ಗ್ರಾಮಸ್ಥರು ಉಪಸ್ಥಿತರಿದ್ದರು.

2025ನೇ ಜನವರಿ 3 ರವಿವಾರದಂದು ಪೆರಾಜೆ ಗುತ್ತು ಪದ್ಮಾವತಿ ಆಳ್ವರವರ ನೇತೃತ್ವದಲ್ಲಿ, ನೀಲೇಶ್ವರ ಪದ್ಮನಾಭ ತಂತ್ರಿಗಳ ದಿವ್ಯ ಉಪಸ್ಥಿತಿಯಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ ದೈವಗಳ ಬಾಲಾಲಯ ಸ್ಥಾಪನೆಯಾಗಿ ದೈವ ಭಕ್ತರ ಕರ ಸೇವೆಯೊಂದಿಗೆ ನೂತನ ಭಂಡಾರ ಮನೆಯ ನಿರ್ಮಾಣ ಕಾರ್ಯಗಳು ಆರಂಭಗೊಳ್ಳಲಿವೆ..

RELATED ARTICLES
- Advertisment -
Google search engine

Most Popular