Tuesday, March 18, 2025
Homeಉಜಿರೆಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್(ರಿ)ನಲ್ಲಿ ನಡೆದ ಕಾರ್ಯಕ್ರಮ

ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್(ರಿ)ನಲ್ಲಿ ನಡೆದ ಕಾರ್ಯಕ್ರಮ

ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ .)ಅಂಬಾನಗರ ಇದರ ವತಿಯಿಂದ ದಿನಾಂಕ 1.9.2024ರಂದು ನಡೆದ ಭರವಸೆಯ ಹೆಜ್ಜೆ ಜಾಗೃತ ಜವಾಬ್ದಾರಿಯುತ ಸಮಾಜಕ್ಕಾಗಿ ಟ್ರಸ್ಟ್ ನ ಕಾರ್ಯಕ್ರಮಗಳ ಅನಾವರಣ ಮತ್ತು ಮುನ್ನೋಟಗಳ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾದ ಸ್ವಾ ಮಿಜಿತಕಾಮನಂದಜಿ ಅಧ್ಯಕ್ಷರು, ರಾಮಕೃಷ್ಣಮಠ, ಮಂಗಳೂರು ಟ್ರಸ್ಟ್ ಹೊಂದಿದ ಯೋಜನೆಯಾದ “ನಮ್ಮ ಊರು ನಮ್ಮ ಹೆಮ್ಮೆ ನಮ್ಮ ಪರಿಸರ ನಮ್ಮ ಜವಾಬ್ದಾರಿ” ಎಂಬ ಸ್ವಚ್ಛ ಸಮಾಜ ನಿರ್ಮಾಣದ ಆಶಯವನ್ನು ಪ್ರಶಂಸಿದರು.
ಒಂದು ನಗರ ಅಥವಾ ಗ್ರಾಮವನ್ನು ಸಮಗ್ರ ಅಭಿವೃದ್ಧಿಗೊಳಿಸುವ ಪರಿಕಲ್ಪನೆಯನ್ನು ರೂಪಿ¸ÀĪÀ°è ನಾವುಗಳು ಎಡವಿ, ಎಲ್ಲಿ ನಾವು ಮುಟ್ಟಬೇಕೋ ಅಲ್ಲಿ ನಾವು ಮುಟ್ಟದೇ ಅಭಿವೃದ್ಧಿಯ ಹಾದಿಯನ್ನು ತಪ್ಪಿದ್ದೇವೆ .ಇಂತಹ ಸಂದರ್ಭದಲ್ಲಿ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ .)ವಿನೂತನವಾಗಿ ಯೋಜನೆ ಮತ್ತು ಯೋಚನೆ ಮಾಡಿಕೊಂಡು ಸಮಾನ ಮನಸ್ಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ನಾಗರಿಕ ಸಮಾಜವನ್ನು ಒಗ್ಗೂಡಿಸಿ ಇಂತಹ ಒಂದು ಉತ್ತಮ ಕಾರ್ಯಕ್ರಮವನ್ನು ಸಂಘಟಿಸದಲ್ಲದೆ ಈ ಎಲ್ಲಾ ಕಾರ್ಯಕ್ರಮ ಭರವಸೆಯ ಹೆಜ್ಜೆಯಾಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ,ಮಾನ್ಯ ಸಂಸದರು ,ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಇವರು
ಕಳೆದ 70 ವರ್ಷಗಳ ಹಿಂದೆ ಸ್ಥಾಪನೆಗೊಂಡ ಮಂದಿರವು ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ .) ಆಗಿ ತಾನು
ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಉದ್ದೇಶದಿಂದ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮವನ್ನು
ಹಮ್ಮಿಕೊಂಡು ಮಾದರಿ ವಾರ್ಡಗಿ ರೂಪಿಸಲು ಹೊರಟಿರುವುದು ಶ್ಲಾಘನೀಯ ಹಾಗೂ ಇದಕ್ಕೆ ಎಲ್ಲಾ ರೀತಿಯ
ಬೆಂಬಲವನ್ನು ನಾನು ಕೊಡಲು ಸಿದ್ದನಾಗಿದ್ದೇನೆ ಎಂದರು.
ಶ್ರೀ. ಡಿ .ವೇದವ್ಯಾಸ ಕಾಮತ್ ಮಾನ್ಯ ಶಾಸಕರು, ಮಂಗಳೂರು ದಕ್ಷಿಣ ಇವರು ಮಂಗಳೂರು ನಗರದಲ್ಲಿ
ತ್ಯಾಜ್ಯ ನಿರ್ವಹಣೆಯು ಒಂದು ದೊಡ್ಡ ಸಮಸ್ಯೆಯಾಗಿತ್ತು ದಿನಂಪ್ರತಿ ಇದು ಮಹಾನಗರ ಪಾಲಿಕೆಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಈ ಸಮಸ್ಯೆ ಕೇವಲ ಸರಕಾರದ ಸಮಸ್ಯೆ ಅಲ್ಲ ಸಮುದಾಯದ ಸಮಸ್ಯೆ ಎಂದು ತಿಳಿದು ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ .) ಭರವಸೆಯ ಹೆಜ್ಜೆ ಎಂಬ ಕಾರ್ಯಕ್ರಮದ ಮುಖಾಂತರ ಎಲ್ಲ ಸಂಘ ಸಂಸ್ಥೆಗಳಿಗೂ ಪ್ರೇರಣೆ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿರುವುದೇ ನಾಗರಿಕ ಸಮಾಜದಲ್ಲಿ ಒಂದು ಉತ್ತಮವಾದ ಕಾರ್ಯ ಎಂದು ತಿಳಿಸಿದರು. ಡಾ. ದಿಲೀಪ್ ಕುಮಾರ್ ಕೆ. ಪ್ರಾಂಶುಪಾಲರು ಮತ್ತು ನಿರ್ದೇಶಕರು, ಕೆ .ಎಸ್ .ತಾಂತ್ರಿಕ ಮಹಾವಿದ್ಯಾಲಯ ಬೆಂಗಳೂರು ನಗರದ ಜ್ವಲಂತ ಸಮಸ್ಯೆ ಆದ ತ್ಯಾಜ್ಯ ನಿರ್ವಹಣೆ ಮತ್ತು ಸಂಚಾರ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಸಹಕಾರದೊಂದಿಗೆ ಮಾದರಿ ವಾರ್ಡು ಯೋಜನೆಗೆ ಹೊರಟಿರುವುದು ಹಾಗೂ ಈ ಯೋಜನೆ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿ ರೂಪುಗೊಳ್ಳಲಿ ಎಂದು ಆಶಿಸುತ್ತೇವೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಸೀತಾರಾಮ ಎ ಭಜನಾ ಮಂಡಳಿಯನ್ನು ಸ್ಥಾಪಿಸಿ ಧಾರ್ಮಿಕ ಕ್ಷೇತ್ರದಲ್ಲಿ ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದಿನ ಕಾರ್ಯ ಯೋಜನೆಯಾಗಿ ಟ್ರಸ್ಟನ್ನು ಸ್ಥಾಪಿಸಿ ಆರೋಗ್ಯಕರ ಮತ್ತು ಸ್ವಚ್ಛ ಸಮಾಜದ ನಿರ್ಮಾಣದ ಆಶಯವನ್ನು ಇರಿಸಿಕೊಂಡು ಇಂದು ಸಂಘ- ಸಂಸ್ಥೆಗಳ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಜಾಗೃತ ಜವಾಬ್ದಾರಿತ ಸಮಾಜಕ್ಕಾಗಿ ಪ್ರಯತ್ನಿಸುತ್ತಿದೆ ಎಂದರು.
ವೇದಿಕೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರು ಶ್ರೀ ಸುಧೀರ್ ಶೆಟ್ಟಿ ಕಣ್ಣೂರ್
ಮತ್ತು ಪ್ರತಿ ಪಕ್ಷದ ನಾಯಕರ ದ ಶ್ರೀ ಪ್ರವೀಣ್ ಚಂದ್ರ ಆಳ್ವರು ಉಪಸ್ಥಿತರಿದ್ದರು ಟ್ರಸ್ಟ್ ನಡೆಸಿದ 5585 ಮನೆಗಳ
ಹಸಿ ಮತ್ತು ಒಣ ತ್ಯಾಜ್ಯದ ಅಧ್ಯಯನದ ವರದಿಯನ್ನು ಮತ್ತು ಮುಂದಿನ ಹಂತದಲ್ಲಿ ತ್ಯಾಜ್ಯ ನಿರ್ವಹಣೆಯ ಸಲಹೆಯ ಮನವಿಯನ್ನು ಮಹಾನಗರ ಪಾಲಿಕೆಯ ಮಾನ್ಯ ಮೇಯರಿಗೆ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಟ್ರಸ್ಟಿನ ಉಪಾಧ್ಯಕ್ಷರಾದ ಡಾ. ಪ್ರವೀಣ್ ಕೆ ಸ್ವಾಗತ ಮತ್ತು ಪ್ರಸ್ತಾವನೆಯನ್ನು
ಮಾಡಿ ಡಾ. ನಯನ ಪಕ್ಕಳ ಟ್ರಸ್ಟ್ ನ ತಜ್ಞ ಸಲಹೆಗಾರರು ವಂದನಾರ್ಪಣೆ ಗೈದು ಅಭಿಷೇಕ್ ಶೆಟ್ಟಿ ನಿರ್ವಾಹಕರು ರೇಡಿಯೋ ಸಾರಂಗ್ ಇವರು ಕಾರ್ಯಕ್ರಮವನ್ನು ನಿರೂಪಿಸಿ ಸ್ಮಿತಾ ಮಹೇಶ್ ಇವರು ಆಶಯಗೀತೆಯನ್ನು
ಹಾಡಿದರು.

RELATED ARTICLES
- Advertisment -
Google search engine

Most Popular