ಗೀತಾ ಜಯಂತಿ ಪ್ರಯುಕ್ತ ಹರೇ ಕೃಷ್ಣ ಮಣಿಪಾಲ ಅವರು ಎಲ್ಲಾ ಸ್ಕೂಲ್ ಕಾಲೇಜು ಲೈಬ್ರರಿ ಯಲ್ಲಿ ಸನಾತನ ಧರ್ಮದ ಏಕೈಕ ಗ್ರಂಥ ಶ್ರೀಮದ್ ಭಗವದ್ಗೀತೆ ಪ್ರತಿಯನ್ನು ಮುಕ್ತವಾಗಿ ಇಟ್ಟು ಆಸಕ್ತಿ ಇರುವ ಮಕ್ಕಳು ಇದನ್ನು ಓದಿ ಅವರ ಮುಂದಿನ ಜೀವನ ಸುದೃಢ ಹಾಗೂ ಭಕ್ತಿಮಯ ಮಾಡಿ ಕೊಳ್ಳಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಶ್ರೀ ಶ್ರೀ ರಮಾನಂದ ಗುರೂಜಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಾವು ನಾಳೆ ಬೆಳಿಗ್ಗೆ 10 ಕ್ಕೆ ಸರಿಯಾಗಿ ಪ್ರಜ್ಞಾ ಇಂಗ್ಲಿಷ್ ಮೀಡಿಯಂ ಸ್ಕೂಲಿನ ಲೈಬ್ರರಿ ಹಾಗೂ ಟೀಚರ್ ಅವರಿಗೂ ಮುಕ್ತವಾಗಿ ಕೊಡುವ ಕಾರ್ಯಕ್ರಮ ಹಂಚಿಕೊಂಡಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀ ರಮಾನಂದ ಗುರೂಜಿ,ಉಷಾ ರಮಾನಂದ ಸ್ಕೂಲ್ ಪ್ರಿನ್ಸಿಪಾಲ್, ಕುಸುಮಾ ನಾಗರಾಜ ಆದಿಶಕ್ತಿ ದೇವಸ್ಥಾನ ಉಸ್ತುವಾರಿ ಭಾಗವಹಿಸಲಿದ್ದಾರೆ.
ಈ ಮಂಗಳಕರ ಕಾರ್ಯಕ್ರಮದ ಮೂಲ ಉದ್ದೇಶ ಉಡುಪಿಯ ಎಲ್ಲಾ ಸ್ಕೂಲ್, ಕಾಲೇಜ್ ಲೈಬ್ರರಿಯಲ್ಲಿ ಶ್ರೀಮದ್ ಭಗವದ್ಗೀತೆ ಇರಬೇಕು ಹಾಗೂ ಮಕ್ಕಳಿಗೆ ಈ ಒಂದು ಆಧ್ಯಾತ್ಮಿಕ ಗ್ರಂಥದ ಲಾಭ ಸಿಗಬೇಕು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಬಂಧುಗಳು ಪಾಲ್ಗೊಂಡು ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.