ಬಂಟ್ವಾಳ: ಇಲ್ಲಿನ ಪಿಲಿಮೊಗರು ಗ್ರಾಮದ ಕೇಸೊಟ್ಟು ನಿವಾಸಿ, ಪ್ರಗತಿಪರ ಕೃಷಿಕ ವಿಶ್ವನಾಥ ಸಪಲ್ಯ ಕೇಸೊಟ್ಟು (೭೮) ಇವರು ಅಸೌಖ್ಯದಿಂದ ರಾಯಿ ಸಮೀಪದ ಬೊಲ್ಪೊಟ್ಟು ಸಹೋದರಿ ಮನೆಯಲ್ಲಿ ಭಾನುವಾರ ಸಂಜೆ ನಿಧನರಾದರು. ಮೃತರಿಗೆ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಇದ್ದಾರೆ. ಸಾವಯವ ಕೃಷಿ ಮತ್ತು ತರಕಾರಿ ಬೆಳೆಯುತ್ತಿದ್ದರು. ಮೃತರ ಅಂತ್ಯಕ್ರಿಯೆ ಕೈತ್ರೋಡಿ ಸ್ಮಶಾನದಲ್ಲಿ ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ನೆರವೇರಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.