ಗೃಹರಕ್ಷಕ ದಳ ಮೂಡಬಿದ್ರಿ ಘಟಕದ ಗೃಹರಕ್ಷಕರಿಗೆ ಪದೋನ್ನತಿ
ದಿನಾಂಕ: 30-12-2024ನೇ ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ ಮೇರಿಹಿಲ್‍ನಲ್ಲಿ ಮೂಡಬಿದ್ರಿ ಘಟಕದ ಗೃಹರಕ್ಷಕರಿಗೆ ಪದೋನ್ನತಿ ಆದೇಶ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಗೃಹರಕ್ಷಕದಳ ಇಲಾಖೆಯಲ್ಲಿ ಕೆಲಸ ಮಾಡುವಾಗ ಅವರ ಸೇವೆಯನ್ನು ಗುರುತಿಸಿ ಕಾಲ ಕಾಲಕ್ಕೆ ಅವರಿಗೆ ಪದೋನ್ನತಿ ನೀಡುವುದು ನಮ್ಮ ಇಲಾಖೆಯ ಕರ್ತವ್ಯ. ಯಾವುದೇ ಫಲಾಪೇಕ್ಷೆ ಇಲ್ಲದೆ ನಿಷ್ಕಾಮ ಸೇವೆ ಸಲ್ಲಿಸುತ್ತಾ ಕನಿಷ್ಠ ಗೌರವಧನಕ್ಕೆ ಕೆಲಸ ಮಾಡುವ ಗೃಹರಕ್ಷಕರಿಗೆ ಕಾಲಕಾಲಕ್ಕೆ ಸಿಗಬೇಕಾದ ಪದೋನ್ನತಿಯನ್ನು ಕೊಟ್ಟರೆ ಅವರಿಗೆ ಇನ್ನಷ್ಟು ಹುರುಪಿನಿಂದ ಕೆಲಸ ಮಾಡಲು ಹುಮ್ಮಸ್ಸು, ಪ್ರೋತ್ಸಾಹ ಸಿಗುತ್ತದೆ. ಈ ನಿಟ್ಟಿನಲ್ಲಿ ಮೂಡಬಿದ್ರಿ ಘಟಕದ ಪದೋನ್ನತಿಯ ಅರ್ಹತೆ ಇರುವ ಗೃಹರಕ್ಷಕರಿಗೆ ಪದೋನ್ನತಿ ನೀಡಿ ಗೌರವಿಸುತ್ತಿದ್ದೇವೆ ಎಂದು ನುಡಿದರು. ಮೂಡಬಿದ್ರಿ ಘಟಕದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಗೃಹರಕ್ಷಕರಾದ ಲಾರೆನ್ಸ್ ಡಿಸೋಜ, ಮೆಟಲ್ ಸಂಖ್ಯೆ 318 ಇವರನ್ನು ಸೆಕ್ಷನ್ ಲೀಡರ್ (ಎಸ್‍ಎಲ್) ನಿಂದ ಸಾರ್ಜೆಂಟ್ ಹುದ್ದೆಗೆ, ಚಂದ್ರಶೇಖರ್, ಮೆಟಲ್ ಸಂಖ್ಯೆ 313 ಇವರನ್ನು ಅಸಿಸ್ಟೆಂಟ್ ಸೆಕ್ಷನ್ ಲೀಡರ್ (ಎಎಸ್‍ಎಲ್) ನಿಂದ ಸೆಕ್ಷನ್ ಲೀಡರ್ ಹುದ್ದೆಗೆ ಹಾಗೂ ಗೃಹರಕ್ಷಕ ಮೆಲ್ವಿನ್ ರೊಸಾರಿಯೋ, ಮೆಟಲ್ ಸಂಖ್ಯೆ 314, ಆನಂದ ನಾಯ್ಕ್, ಮೆಟಲ್ ಸಂಖ್ಯೆ 339 ಹಾಗೂ ರಾಮಚಂದ್ರ ನಾಯ್ಕ್, ಮೆಟಲ್ ಸಂಖ್ಯೆ 326 ಇವರುಗಳನ್ನು ಗೃಹರಕ್ಷಕ ಹುದ್ದೆಯಿಂದ ಅಸಿಸ್ಟೆಂಟ್ ಸೆಕ್ಷನ್ ಲೀಡರ್ (ಎಎಸ್‍ಎಲ್) ಹುದ್ದೆಗೆ ಪದೋನ್ನತ್ತಿ ನೀಡಿ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮೂಡಬಿದ್ರಿ ಘಟಕದ ಪ್ರಭಾರ ಘಟಕಾಧಿಕಾರಿ ಚಂದ್ರಶೇಖರ್, ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಸುನಿಲ್, ಗೃಹರಕ್ಷಕರಾದ ಮಂಗಳೂರು ಘಟಕದ ಸಂಜಯ್ ಶೆಣೈ, ರೇಣುಕಾ, ಸುಲೋಚನಾ, ಖತೀಜಮ್ಮ, ಮಂಜುಳಾ ಮತ್ತು ಪುಷ್ಪರಾಜ್ ಮುಂತಾದವರು ಉಪಸ್ಥಿತರಿದ್ದರು.