Saturday, June 14, 2025
Homeಉಡುಪಿಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರ ರಕ್ಷಣೆ

ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರ ರಕ್ಷಣೆ

ಉಡುಪಿ: ಜೀವನದಲ್ಲಿ ಎದುರಾದ ಅಸಹಾಯಕ ಪರಿಸ್ಥಿತಿಯಿಂದಾಗಿ ಭೀಕ್ಷಾಟನೆಯಿಂದ ಉಡುಪಿಯಲ್ಲಿ ಜೀವನ ನಿರ್ವಹಿಸುತ್ತಿದ್ದ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದಿಂದ, ಉಡುಪಿಯ ಮಲಬಾರ್ ಗೋಲ್ಡ್ ಆಭರಣ ಮಳಿಗೆಯ ಸಿಬ್ಬಂದಿಯವರು ವೃದ್ಧರನ್ನು ಸುರಕ್ಷಿತವಾಗಿ ಊರಾದ ಚೆನ್ನೈಗೆ ರವಾನಿಸಿದರು. ಪ್ರತಿ ನಿತ್ಯ ಮುಂಜಾನೆ ಮಲಬಾರ್ ಗೋಲ್ಡ್ ಸಂಸ್ಥೆಯು ಪತ್ರಿ ನಿತ್ಯ ಮುಂಜಾನೆ ನಗರದಲ್ಲಿ ನೆಲೆಕಂಡಿರುವ ಅನಾಥರಿಗೆ ಅಸಹಾಯಕರಿಗೆ ಉಪಹಾರದ ಪೊಟ್ಟಣಗಳನ್ನು ವಿತರಿಸುತ್ತಿದೆ. ಆ ಸಮಯದಲ್ಲಿ ವೃದ್ದರು ಆಹಾರದ ಪೊಟ್ಟಣವನ್ನು ಸ್ವೀಕರಿಸುತ್ತಿದ್ದರು. ತನ್ನ ಹೆಸರು ಎಂ.ಪ್ರಭಾವಾಸನ್ ಚೆನ್ನೈಯ ನಿವಾಸಿ, ಅಸಹಾಯಕ ಪರಿಸ್ಥಿತಿಯಲ್ಲಿರುವೆನು ಊರಿಗೆ ಹೋಗಲು ವ್ಯವಸ್ಥೆಗೊಳಿಸುವಂತೆ ಆಹಾರ ಪೊಟ್ಟಣ ವಿತರಣಾ ಸಿಬ್ಬಂದಿಯವರಲ್ಲಿ ಹೇಳಿಕೊಂಡಿದ್ದರು. ವಿಷಯ ತಿಳಿದ ಮಲಬಾರ್ ಗೋಲ್ಡ್ ಮಳಿಗೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ನೆರವಿಗೆ ಬಂದು, ವೃದ್ಧರನ್ನು ಚಿಕಿತ್ಸೆ ಒಳಪಡಿಸಿ, ಊರಿಗೆ ರವಾನಿಸಿದರು. ಕಾರ್ಯಚರಣೆಯಲ್ಲಿ ಹಫೀಝ್ ರೆಹಮಾನ್ ಶಾಖಾ ಮುಖ್ಯಸ್ಥರು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ, ತಂಝೀಮ್ ಶಿರ್ವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಾರ್ಕೆಟಿಂಗ್ ವ್ಯವಸ್ಥಾಪಕರು, ಸಿರಾಜ್ ದ್ದೀನ್ ವೈ ಪ್ರಾದೇಶಿಕ ಸಂಯೋಜಕರು ಕರ್ನಾಟಕ ತನಲ್, ಸಿಂಧೂ ಚೆನ್ನೈ ತನಲ್ ಪ್ರತಿನಿಧಿ ರಿಂಷಾದ್ ಮುಖ್ಯಸ್ಥರು ಪುನರ್ವಸತಿ ಕೇಂದ್ರ ತನಲ್ ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular