Monday, December 2, 2024
Homeಶಿಕ್ಷಣಮಂಗಳೂರು ವಿಶ್ವವಿದ್ಯಾಲಯದಲ್ಲಿನ ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯಗಳನ್ನು ಒಳ ಗೊಂಡ ಸಮಸ್ಯೆಗಳನ್ನು ಖಂಡಿಸಿ ಪ್ರತಿಭಟನೆ

ಮಂಗಳೂರು ವಿಶ್ವವಿದ್ಯಾಲಯದಲ್ಲಿನ ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯಗಳನ್ನು ಒಳ ಗೊಂಡ ಸಮಸ್ಯೆಗಳನ್ನು ಖಂಡಿಸಿ ಪ್ರತಿಭಟನೆ

ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಒಂದಾಗಿದ್ದು ಪ್ರಾರಂಭದಿಂಥಲೂ ಸಹ ತನ್ನದೇ ಆದ ಘನತೆ ಗೌರವವನ್ನು ಉಳಿಸಿಕೊಂಡು ಬಂದಿದೆ. ಬೇರೆ ಬೇರೆ ಜಿಲ್ಲೆಗಳಿಂದ, ಬೇರೆ ಬೇರೆ ರಾಜ್ಯಗಳಿಂದ ನಾವಿರಾರು ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣವನ್ನು ವಡೆಯುವ ಉದ್ದೇಶಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯವನ್ನು ಆಯ್ಕೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ವವಿದ್ಯಾಲಯದಲ್ಲಿ ಕಾಣಬರುತ್ತಿರುವ ಸಾಕಷ್ಟು ಬದಲಾವಣೆಗಳಿಂದಾಗಿ ವಿಶ್ವವಿದ್ಯಾಲಯದ ಮೌಲ್ಯಯುತ ಶಿಕ್ಷಣವೆಂಬುದು ಮುನುಕಾಗಿದೆ.

ಮಂಗಳೂರು ವಿಶ್ವವಿದ್ಯಾಲಯವು ಹತ್ತಾರು ವರ್ಷಗಳಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹೊರೆಯನ್ನು ಹೇರದೆ ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಮುಂಚೂಣಿಯಲ್ಲಿತ್ತು. ಅದರೆ ಪ್ರಶಕ್ತ ವರ್ಷಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿತ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಮರುಮೌಲ್ಯಮಾಪನ ಶುಲ್ಕ ಮತ್ತು SC ST ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಶುಲ್ಕ ವಿನಾಯತಿಯನ್ನು ವರಿಗಣಿಸದೆ ಪೂರ್ಣ ಶುಲ್ಕ ಭರಿಸುವುದು ಮತ್ತು ಏಕಾಏಕಿ ಶುಲ್ಕದ ಏರಿಕೆಯೂ ವಿದ್ಯಾರ್ಥಿಗಳಲ್ಲಿ ಗೊಂದಲಗಳನ್ನು ಸೃಷ್ಟಿಸುವುದರ ಜೊತೆಯಲ್ಲಿ ಶಿಕ್ಷಣದಿಂದ ವಂಚಿತರಾಗಿಸುವಂತಿದೆ. ಪ್ರಶಕ್ತ ನಾಲಿನ ಶುಲ್ಕದಲ್ಲಿ ಸುಮಾರು ಶೇಕಡಾ 50 ರಿಂದ 60 ರಷ್ಟು ಏರಿಕೆಯನ್ನು ಮಾಡಿರುವುದು ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿಯನ್ನು ಎತ್ತಿ ತೋರಿಸಿದಂತಿದೆ. ಮತ್ತು ಇದನ್ನು ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ.

ವಠ್ಯಕ್ರಮಗಳ ಕಾರ್ಯಭಾರವನ್ನು ನಿರ್ಧರಿಸುವ ಹಾಗೂ ಐಚ್ಚಿಕ ಪತ್ರಿಕೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ನಿರ್ಧಾರ ಮಾಡುವ ತೀರ್ಮಾನವು ವಿಶ್ವವಿದ್ಯಾಲಯದ ವಿಷಯಗಳ ಅಧ್ಯಯನ ಮಂಡಳಿಗಳ ಅಂತಿಮ ತೀರ್ಮಾನವಾಗಿರುತ್ತದೆ. ಆದರೆ ಅಧ್ಯಯನ ಮಂಡಳಿಗಳು ನಿರ್ಧಾರ ಮಾಡಿರುವ ಕಾರ್ಯಭಾರದ ವಿರುದ್ಧವಾಗಿ ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ ಮಾಡಿರುವುದು ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಉಪನ್ಯಾಸಕರಿಗೆ ಗೊಂದಲ ನಿರ್ಮಾಣ ಮಾಡಿದೆ. ಈ ವಿಷಯದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಮಧ್ಯಪ್ರವೇಶ ಎಷ್ಟು ಸೂಕ್ತ ಎಂಬುದನ್ನು ನೀವು ನಿರ್ಧರಿಸಬೇಕಾಗುತ್ತದೆ.

ಮೌಲ್ಯಮಾವನ ವಲಿತಾಂಶಗಳು ಯಾರದೋ ಅಂಕಗಳು ಇನ್ಯಾವುದೋ ವಿದ್ಯಾರ್ಥಿಗೆ ಪ್ರಕಟವಾಗುತ್ತದೆ ಉತ್ತರ ಪತ್ರಿಕೆಗಳೇ ಅದಲು ಬದಲಾಗಿರುವ ಅನೇಕ ಪ್ರಕರಣಗಳು ಕಂಡುಬಂದಿದೆ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡಬೇಕು.
ಮತ್ತು ಮರುಮೌಲ್ಯ ಮಾವನ ಫಲಿತಾಂಶವನ್ನು ನೀಡದೆ ಪರೀಕ್ಷೆ ಕಟ್ಟಲು ದಿನಾಂಕ ನೂಚಿಸುತ್ತಿರುವುದು ಎಷ್ಟು ಸೂಕ್ತ ಎಂಬುದನ್ನು ಯೋಚಿಸಬೇಕಾದ ಅನಿವಾರ್ಯತೆಯಿದೆ ಈಗಾಗಲೇ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಮುಂದಿನ ಉದ್ಯೋಗ ಮತ್ತು ಶಿಕ್ಷಣವನ್ನು ಆದರಿಸಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಭರದಲ್ಲಿದ್ದು, ಈ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ದೊರಕದೆ ಇರುವುದು ಸೋಚನೆಯ ಸಂಗತಿಯಾಗಿದೆ ಮತ್ತು ಉದ್ಯೋಗವನ್ನು ಹುಡುಕುತ್ತಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಈ ರೀತಿಯ ಅನಾನುಕೂಲತೆಗಳಿಂದ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಈ ಕೂಡಲೇ ಈ ರೀತಿಯ ಪ್ರಮಾಣ ಪತ್ರ ಸಂಬಂಧಿತ ಸಮಸ್ಯೆಗಳನ್ನು ತಕ್ಷಣದಲ್ಲಿ ಪರಿಹರಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಅನುವು ಮಾಡಿಕೊಡಬೇಕೆಂಬುದು ವಿದ್ಯಾರ್ಥಿ ಪರಿಷತ್ ನ ಅಗ್ರಹವಾಗಿದೆ.

ವಿಶ್ವವಿದ್ಯಾಲಯದಿಂದ ನೀಡಬೇಕಾದ ಮಾರ್ಕ್ಸ್ ಕಾರ್ಡ್ ಗಳು ಡಿಜಿಟಲ್ ರೂಪದಲ್ಲಿ ನೀಡಲಾಗುತ್ತಿದ್ದು, ಬಿಜಿ ಲಾಕರ್ ನ ಮೂಲಕ ಲಭ್ಯವಾಗುವ ಅಂಕಪಟಿಗಳಲ್ಲಿ ಹಲವಾರು ಲೋಪ ದೋಷಗಳು ಕಂಡುಬರುತ್ತಿವೆ ಸಾಕಷ್ಟು ವಿದ್ಯಾರ್ಥಿಗಳಿಗೆ ಕೆಲವು ವಿಷಯಗಳಿಗೆ ಸಂಬಂಧಿಸಿದ ಅಂಕಗಳು UUCMS ಪೋರ್ಟಲ್ ನಲ್ಲಿ ನಮೂದಿಸದೆ ಇರುವುದು ವಿದ್ಯಾರ್ಥಿಗಳಿಗೆ ಗೊಂದಲವನ್ನು ಸೃಷ್ಟಿಸಿದ್ದು, ವಿದ್ಯಾರ್ಥಿಗಳಿಗೆ ಸಂಬಂಧಿತ ಸ್ಕಾಲರ್ ಶಿವ್, ಹಾನ್ಸೆಲ್ ಇನ್ನಿತರ ಸೌಲಭ್ಯಗಳಿಂದ ವಂಚಿತಗೊಳಿಸುತ್ತಿದೆ. ಅದಕಾರಣ ಈ ರೀತಿಯ ಪರೀಕ್ಷಾ ಫಲಿತಾಂಶ ಸಂಬಂಧಿತ ಸಮಸ್ಯೆಗಳನ್ನು ತಕ್ಷಣದಲ್ಲಿ ಪರಿಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂಬುದು ವರಿಷತ್ ನ ಆಗ್ರಹವಾಗಿದೆ.

ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿರುವ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರ ಕೊರಣೆ ಅಷ್ಟೇ ಅಲ್ಲದೆ ಮೂಲಭೂತ ಸೌಕರ್ಯಗಳ ಸಮಸ್ಯೆ ಪಿಡೋವಕರಗಳ ಸಮಸ್ಯೆ, ಪ್ರಾಯೋಗಿಕ ಉಪಕರಣಗಳ ಕೊರತೆ ಹೀಗೆ ನಾಲು ನಾಲು ಸಮಸ್ಯೆಗಳಿದ್ದು ಇಂತಹ ಕೊರತೆಗಳಿಂದಾಗಿ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಈ ರೀತಿಯ ಸಮಸ್ಯೆಗಳನ್ನು ಕುರಿತು ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಮೂಲಕ ವಿದ್ಯಾರ್ಥಿ ಪರಿಷತ್ ಆಗ್ರಹಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬೇರೆ ಬೇರೆ ಕಾಲೇಜುಗಳ ಸುಮಾರು 2000 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಳೆದ 16 ವರ್ಷಗಳಿಂದಲೂ ಸಹ ವಿದ್ಯಾರ್ಥಿಗಳ ಸಮಸ್ಯೆಗೆ ಧ್ವನಿ ಗೂಡಿಸುತ್ತಾ, ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಹೋರಾಟಗಳನ್ನು ರೂಪಿಸುತ್ತಾ ಬಂದಿರುವ ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. ಯಾವುದೇ ರೀತಿಯ ಸಾರ್ವಜನಿಕ ಅಸ್ತಿಗಳ ಹಾನಿ ಮಾಡುವಂತಹ ಕಾರ್ಯವನ್ನು ವರಿಷತ್ ನ ಕಾರ್ಯಕರ್ತರು ಮಾಡುವುದಿಲ್ಲ ಈಗಾಗಲೇ ವಿಶ್ವವಿದ್ಯಾಲಯದ ಹೋರಾಟಕ್ಕೆ ಸಂಬಂಧಿಸಿದಂತೆ ನಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿವಿಯ ಆಡಳಿತ ಸೌಧದ ಬಾಗಿಲಿನ ಗಾಜಿನ ಒಡೆತಕ್ಕೆ ಸಂಬಂಧಿಸಿದಂತೆ ಈ ಕಾರ್ಯವು ಕಾರ್ಯಕರ್ತರು ಮಾಡಿರುವಂತದ್ದಲ್ಲ ಮತ್ತು ಪೋಲಿಸ್ ಮತ್ತು ಕಾರ್ಯಕರ್ತರ ನಡುವಿನ ತಳ್ಳಾಟದ ನಡುವೆ ಆಕಸ್ಮಿಕವಾಗಿ ನಡೆದಿರುವುದೆಂದು ಈ ಮೂಲಕ ಸ್ಪಷ್ಟಪಡಿಸುತ್ತೇವೆ.

RELATED ARTICLES
- Advertisment -
Google search engine

Most Popular