Wednesday, January 15, 2025
HomeUncategorizedಮಂಗಳೂರು ನಗರ ಪೋಲೀಸ್ ಆಯುಕ್ತರನ್ನು ಅಮಾನತುಗೊಳಿಸುವಂತೆ ಸಿಪಿಐಎಂ ನ ಪ್ರತಿಭಟನೆ ಪ್ರದರ್ಶನ

ಮಂಗಳೂರು ನಗರ ಪೋಲೀಸ್ ಆಯುಕ್ತರನ್ನು ಅಮಾನತುಗೊಳಿಸುವಂತೆ ಸಿಪಿಐಎಂ ನ ಪ್ರತಿಭಟನೆ ಪ್ರದರ್ಶನ

ನಾಗರಿಕರ ಸವಿಧಾನ ಬದ್ಧ ಪ್ರತಿಭಟನೆಗೆ ಅವಕಾಶ ನೀಡಿದ ಪ್ರತಿಭಟನೆ ನಡೆಸಿದವರ ಮೇಲೆ ಎಫ್‌ಐಆರ್ ಹಾಕುವ ಕೋಮುವಾದಿಗಳಿಗೆ ಅವಕಾಶ ನೀಡಿ ತಾರತಮ್ಯ ಮಾಡುವ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮಾ ಅಗರ ವಾಲ್ ಅವರನ್ನು ಅಮಾನತ್ತುಗೊಳಿಸಿ ತನಿಖೆಗೊಳ ಪಡಿಸಬೇಕೆಂದು ಒತ್ತಾಯಿಸಿ ೯ ರಂದು ಮೂಡಬಿದ್ರೆ ತಹಶೀಲ್ದಾರರ ಕಚೇರಿ ಮುಂದುಗಡೆ ಸಿಪಿಐಎಂನ ಪ್ರತಿಭಟನೆ ಪ್ರದರ್ಶನ ನಡೆಸಲಾಯಿತು.
ಪ್ರತಿಭಟನ ಪ್ರದರ್ಶನವನ್ನು ಉದ್ದೇಶಿಸಿ ಪಕ್ಷದ ರಾಜ್ಯ ಮುಂದಾಳು ಕೆ ಯಾದವ ಶೆಟ್ಟಿ ಅವರು ಮಾತನಾಡುತ್ತಾ ಸುಲಗೆ ದಂಧೆಗಾರರೊಂದಿಗೆ ಶಾಮಿಲಾಗಿರುವ ಪೊಲೀಸ್ ಆಯುಕ್ತರಾದ ಅನುಪಮಾ ಅಗರವಾಲ್ ಅವರು ಸಂವಿಧಾನ ಬಾಹಿರವಾಗಿ ಹೋರಾಟವನ್ನು ಹತ್ತಕ್ಕಿ ಸಂಘ ಪರಿವಾರವನ್ನು ತೃಪ್ತಿ ಪಡಿಸುತ್ತಿದ್ದಾರೆ ಜನಸಾಮಾನ್ಯರ ನಾಗರಿಕರ ಹಕ್ಕುಗಳು ನಿರಾಕರಣೆಯಾದಾಗ ಪ್ರತಿಭಟನೆ ಬಹಿರಂಗ ಸಭೆ ಅನಿವಾರ್ಯ ಪೇಲಿಸ್ತೇನಿಯಲ್ಲಿ ಶಾಂತಿ ಸ್ಥಾಪನೆಯಾಗಬೇಕು ಕೂಳೂರು ಸೇತುವೆ ನಂತೂರು ಮೇಲ್ಪೇತುವೆ ರಾಷ್ಟ್ರೀಯ ಹೆದ್ದಾರಿ ಗುಂಡಿ ಮುಚ್ಚುವ ಕೆಲಸ ತ್ವರಿತಗೊಳಿಸಿ ಎಂಬ ಬೇದಿಕೆಗಳು ಆಯುಕ್ತರಿಗೆ ಪಥ್ಯೆ ಆಗುತ್ತಿಲ್ಲ ಆದರೆ ಸಂಘ ಪರಿವಾರದ ವಿದ್ಯಾರ್ಥಿ ಸಂಘಟನೆ ಹಿಂದು ಸಂಘಟನೆಗಳು ಬಾಂಗ್ಲಾದೇಶದ ಹೆಸರಿನಲ್ಲಿ ದಾಂದಲೆ ಮಾಡಿರುವುದು ಕಲ್ಲಡ್ಕ ಪ್ರಭಾಕರ ಭಟ್ ಅವರು ಮುಸ್ಲಿಂ ಹೆಣ್ಣು ಮಕ್ಕಳ ಮೇಲೆ ಮಾನ ಹಾನಿ ಭಾಷಣ ಮಾಡಿರುವುದು ಪಥ್ಯೆ ಆಗುತ್ತದೆ. ಈ ರೀತಿಯ ತಾರತಮ್ಯ ಮಾಡುತ್ತಿರುವ ಆಯುಕ್ತರನ್ನು ನಾಗರಿಕ ಜನತೆ ಕ್ಷಮಿಸುವುದಿಲ್ಲ ಎಂದು ಅವರು ತೀವ್ರವಾಗಿ ಖಂಡಿಸಿದರು.
ಆಯುಕ್ತರನ್ನು ಅಮಾನತುಗೊಳಿಸದಿದ್ದರೆ ಹೋರಾಟವನ್ನು ಇನ್ನಷ್ಟು ವ್ಯಾಪಕಗೊಳಿಸಲಾಗುವುದೆಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ವಸಂತ ಆಚಾರ್ಯ ಅವರು ವಿವರಿಸಿದರು ಅವರು ಮುಂದುವರಿದು ನಮ್ಮ ಜಿಲ್ಲೆಯ ಸ್ವಾತಂತ್ರ‍್ಯ ಪೂರ್ವದಿಂದ ಹೋರಾಟ ಪ್ರತಿಭಟನೆ ನಡೆದು ಬೀಡಿ ಹಂಚು ನೇಯ್ಗ ಭೂ ಸುಧಾರಣಾ ಕಾಯ್ದೆ ಕಟ್ಟಡ ಕಾರ್ಮಿಕರ ಕಾಯ್ದೆ ಜಾರಿಗೆ ಬಂದಿರುವುದು, ಕಾರ್ಮಿಕರಿಗೆ ರೈತರಿಗೆ ದಲಿತ ಆದಿವಾಸಿಗಳಿಗೆ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿರುವುದು ಆದರೆ ಆಯುಕ್ತ ಅನುಪಮಾ ಅಗರವಾಲ್ ಕರ್ನಾಟಕ ರಾಜ್ಯ ಸರಕಾರದ ವಿರುದ್ಧ ಪರ್ದಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ ಸಂವಿಧಾನ ಪ್ರಜಾ
ಪ್ರಭುತ್ವವನ್ನು ಗಳಿಗೆ ತೂರುತ್ತಿದ್ದಾರೆ ಇಂತಹ ಆಯುಕ್ತರು ಜಿಲ್ಲೆಗೆ ಅಪಾಯಕಾರಿಯಾಗಿದ್ದಾರೆ ಅಕ್ರಮ ದಂಧೆ ಭ್ರಷ್ಟಾಚಾರ ಅ ವ್ಯವಹಾರದ ಕೇಂದ್ರವಾಗಿರುವ ಪೊಲೀಸ್ ಆಯುಕ್ತರ ಕಚೇರಿ ಜನಪರ ಮುಖವಾಡವನ್ನು ಪ್ರದರ್ಶಿಸುತ್ತಿದ್ದಾರೆ ರಾಜ್ಯದ ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರದ ವಿರುದ್ಧ ಆಯುಕ್ತರು ಬಿಜೆಪಿಯ ಪರವಾಗಿ ಕೆಲಸ ನಿರ್ವಹಿಸುತ್ತಿದ್ದು ಕೂಡಲೇ ಆಯುಕ್ತರನ್ನು ಅಮಾನತುಗೊಳಿಸಿ ತನಖೆಗೊಳಪಡಿಸಬೇಕೆಂದು ಅವರು ಒತ್ತಾಯಿಸಿದರು. ಈಗಾಗಲೇ ಪ್ರತಿಭಟನೆ ವ್ಯಾಪಕಗೊಳ್ಳುತ್ತಿದ್ದು ಡಿ 23 ರಂದು ಸಮಾನ ಮನಸ್ಥ ಸಂಘಟನೆಗಳು ಸಾಮಾಜಿಕ ಧರಣೆಯನ್ನು ಸಾರ್ವಜನಿಕರು ಬೆಂಬಲಿಸಬೇಕು 2025 ಜ 23 ರಂದು ಪೊಲೀಸ್ರ ಕಚೇರಿ ಚಲೋ ಹೋರಾಟವನ್ನು ನಡೆಸಲಾಗುವುದೆಂದು ಅವರು ತಿಳಿಸಿದರು.
ತಾಲೂಕು ಕಾರ್ಯದರ್ಶಿ ರಮಣಿ ಸ್ವಾಗತಿಸಿದರು. ಜಿಲ್ಲಾ ಸಮಿತಿ ಸದಸ್ಯೆ ರಾಧಾ ವಂದಿಸಿದರು.
ಗಿರಿಜಾ , ಲಕ್ಷ್ಮಿ , ಸೀತಾರಾಮ ಶೆಟ್ಟಿ, ಕೃಷ್ಣಪ್ಪ ಕೋಣಜಿ, ದಿವಾಕರ ನಿಡ್ಡೋಡಿ, ರಿಯಾಜ್ ಮಂಜೂರು, ಕೃಷ್ಣಪ್ಪ ನೆಡಿಗುಡ್ಡೆ , ಕೃಷ್ಣಪ್ಪ ಬಿರಾವು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular