Saturday, December 14, 2024
HomeUncategorizedಕೆನಡಾದ ಹಿಂದೂ ದೇವಸ್ಥಾನದ ಮೇಲೆ ದಾಳಿ ನಡೆಸಿದವರ ಮೇಲೆ ಕಠಿಣ ಕ್ರಮಕೈಗೊಳ್ಳದಿದ್ದರೆ ರಾಯಭಾರಿ ಕಚೇರಿ ಎದುರು...

ಕೆನಡಾದ ಹಿಂದೂ ದೇವಸ್ಥಾನದ ಮೇಲೆ ದಾಳಿ ನಡೆಸಿದವರ ಮೇಲೆ ಕಠಿಣ ಕ್ರಮಕೈಗೊಳ್ಳದಿದ್ದರೆ ರಾಯಭಾರಿ ಕಚೇರಿ ಎದುರು ಪ್ರತಿಭಟನೆ

ಕೆನಡಾದ ಹಿಂದೂ ದೇವಸ್ಥಾನದ ಮೇಲೆ ದಾಳಿ ನಡೆಸಿದವರ ಮೇಲೆ ಕಠಿಣ ಕ್ರಮಕೈಗೊಳ್ಳದಿದ್ದರೆ
ಕೆನಡಾ ಸರಕಾರವನ್ನು ಎಚ್ಚರಿಸಲು ಅವರ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವೆವು !

ಮೊನ್ನೆಯಷ್ಟೇ, ಕೆನಡಾದ ಬ್ರೆಂಪ್ಟನ್ ಪ್ರದೇಶದಲ್ಲಿ ಹಿಂದೂ ದೇವಸ್ಥಾನದ ಮೇಲೆ ’ಸಿಖ್ ಫಾರ್ ಜಸ್ಟೀಸ್’ ಸಂಘಟನೆ ಮತ್ತು ಖಲಿಸ್ತಾನಿ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದರು; ಆದರೆ ಈ ಹಿಂಸಾತ್ಮಕ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಕೆನಡಾ ಸರಕಾರ ಅವರನ್ನು ರಕ್ಷಿಸುವ ಕೆಲಸ ಮಾಡಿದೆ. ನಾವು ಇದನ್ನು ತೀವ್ರ ಶಬ್ದಗಳಲ್ಲಿ ಖಂಡಿಸುತ್ತೇವೆ. ಈ ಹಿಂದೆಯೂ ಕೆನಡಾದಲ್ಲಿ ದೇವಸ್ಥಾನಗಳ ಮೇಲೆ ದಾಳಿಗಳು ನಡೆದಿವೆ. ಕೆನಡಾ ಸರಕಾರವು ಈ ಎಲ್ಲಾ ದಾಳಿಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು, ಇದು ನಮ್ಮ ಬೇಡಿಕೆಯಾಗಿದೆ. ಇಲ್ಲವಾದರೆ ಕೆನಡಾ ಸರಕಾರವನ್ನು ಎಚ್ಚರಿಸಲು ಭಾರತದಲ್ಲಿ ಅವರ ರಾಯಭಾರಿ ಕಚೇರಿ ಎದುರು ಹಿಂದುತ್ವವಾದಿ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಹಿಂದೂ ಜನಜಾಗೃತಿ ಸಮಿತಿ ಎಚ್ಚರಿಕೆ ನೀಡಿದೆ.

ಭಾರತೀಯ ಹೈಕಮೀಷನರ್ ಅವರು ಕೆನಡಾದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಬಗ್ಗೆ ಮಾಹಿತಿಯಿದ್ದರೂ, ಅವರ ಮತ್ತು ದೇವಸ್ಥಾನದ ಭದ್ರತೆಗಾಗಿ ಅಥವಾ ಈ ದಾಳಿಯನ್ನು ತಡೆಯಲು ಕೆನಡಾ ಸರಕಾರವು ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿರಲಿಲ್ಲ. ಇದನ್ನು ಗಮನಿಸಿದಾಗ ಈ ದಾಳಿಯಲ್ಲಿ ಕೆನಡಾ ಸರಕಾರವೂ ಭಾಗಿಯಾಗಿದೆಯೇ ? ಎನ್ನುವ ಪ್ರಶ್ನೆ ಮೂಡುತ್ತದೆ. ಖಲಿಸ್ತಾನಿ ಭಯೋತ್ಪಾದಕರು ಹರದೀಪ ಸಿಂಗ ನಿಜ್ಜರ ಹತ್ಯೆಯ ಬಳಿಕ ಕೆನಡಾದಲ್ಲಿ ನಿರಂತರವಾಗಿ ಹಿಂದೂಗಳ ಮತ್ತು ದೇವಸ್ಥಾನಗಳ ಮೇಲೆ ನಡೆಯುವ ದಾಳಿಯನ್ನು ತಡೆಯುವಲ್ಲಿ ಕೆನಡಾ ಸರಕಾರವು ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಭಾರತ ಸರಕಾರ ಈ ವಿಷಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಿ ಕೆನಡಾ ಸರಕಾರದ ವಿರುದ್ಧ ಕ್ರಮ ಕೈಕೊಳ್ಳಲು ಒತ್ತಡ ಹೇರಬೇಕು ಎನ್ನುವುದು ಭಾರತ ಸರಕಾರದ ಬಳಿ ನಮ್ಮ ಬೇಡಿಕೆಯಾಗಿದೆ. ದಾಳಿ ನಡೆಸಿರುವ ಸಂಘಟನೆಯ ಭಾರತದಲ್ಲಿರುವ ಎಲ್ಲಾ ಬೆಂಬಲಿಗರ ವಿರುದ್ಧ ಭಾರತ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.

ಮ್ಮ ಸವಿನಯ
ಶ್ರೀ. ಗುರುಪ್ರಸಾದ ಗೌಡ
ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
(ಸಂಪರ್ಕ ಸಂಖ್ಯೆ : 9343017001)

RELATED ARTICLES
- Advertisment -
Google search engine

Most Popular