Wednesday, April 23, 2025
Homeಮಂಗಳೂರುಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯಕ್ಕೆ ವೇಗ ನೀಡಲು ಬಂಟ್ವಾಳದಲ್ಲಿ 'ಪ್ರಾಂತೀಯ ಹಿಂದು ರಾಷ್ಟ್ರ ಅಧಿವೇಶನ'

ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯಕ್ಕೆ ವೇಗ ನೀಡಲು ಬಂಟ್ವಾಳದಲ್ಲಿ ‘ಪ್ರಾಂತೀಯ ಹಿಂದು ರಾಷ್ಟ್ರ ಅಧಿವೇಶನ’

ಹಿಂದೂ ಇಕೋಸಿಸ್ಟಮ್ ನಿರ್ಮಾಣ ಮಾಡಲು 1000 ಕ್ಕೂ ಹೆಚ್ಚು ಹಿಂದುತ್ವವಾದಿಗಳ ಸಹಭಾಗ !

ಮಂಗಳೂರು : ವಕ್ಫ್ ಬೋರ್ಡ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ರಾಜ್ಯದ‌ ಸಾವಿರಾರು ರೈತರ, ದೇವಸ್ಥಾನಗಳ ಜಮೀನುಗಳನ್ನು ಕಬಳಿಸಲು ಪ್ರಯತ್ನಿಸುತ್ತಿದೆ. ಇತ್ತಿಚೆಗೆ ಕರ್ನಾಟಕ ಸರಕಾರವು ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ‌ 4500 ಕೋಟಿ ರೂಪಾಯಿಗಳನ್ನು‌ ನೀಡಿದೆ.  ಈ ವರ್ಷದ ಶಿವರಾತ್ರಿ, ಗಣೇಶ ಚತುರ್ಥಿಯ ವಿಸರ್ಜನೆಯ ಸಂದರ್ಭದಲ್ಲಿ ಮತ್ತು ದೀಪಾವಳಿ ಹಬ್ಬದಲ್ಲಿ ಹಿಂದೂಗಳ ಮೇಲೆ ಕಲ್ಲು ತೂರಾಟ, ಮಾರಣಾಂತಿಕ‌ ಹಲ್ಲೆ  ಮಾಡಲಾಯಿತು. ಲವ್ ಜಿಹಾದ್, ಹಲಾಲ್ ಜಿಹಾದ್ ಮೀತಿಮೀರಿ ನಡೆಯುತ್ತಿದೆ, ರಾಜ್ಯದ ಪಠ್ಯ ಇತಿಹಾಸದಲ್ಲಿ ಹಿಂದುಗಳ ಇತಿಹಾಸವನ್ನು ತಿರುಚಲಾಗುತ್ತಿದೆ. ಮಣಿಪುರ, ಮಿಜೋರಾಮ್‌ಗಳನ್ನು ಪ್ರತ್ಯೇಕ ಕ್ರೈಸ್ತ ದೇಶವಾಗಿ ಸ್ಥಾಪಿಸುವ ಕುತಂತ್ರ ಹಾಗೂ ವಿಭಜನೆಯ ಸಂಕೇತ ಇದಾಗಿದೆ. ಭಾರತದ ಅಖಂಡತೆಯನ್ನು ಕಾಪಾಡಲು ಹಿಂದು ರಾಷ್ಟ್ರ ಅಗತ್ಯವಾಗಿದೆ. ಇದಕ್ಕಾಗಿ ಹಿಂದು ಇಕೋಸಿಸ್ಟಮ್ ನಿರ್ಮಿಸಲು ಚಿಂತನೆ ಮತ್ತು ಕಾರ್ಯಯೋಜನೆ ರೂಪಿಸಲು ಹಿಂದೂ ಜನಜಾಗೃತಿ ಸಮಿತಿಯು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಮಾರ್ಚ್ 16 ರಂದು ಬೆಳಿಗ್ಗೆ 10 ರಿಂದ ಪ್ರಾಂತೀಯ ಹಿಂದು ರಾಷ್ಟ್ರ ಅಧಿವೇಶನವನ್ನು ಆಯೋಜನೆ ಮಾಡಲಾಗಿದೆ. ಈ ಅಧಿವೇಶನದಲ್ಲಿ ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರಕನ್ನಡ ಜಿಲ್ಲೆಯಿಂದ 100 ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ 2500 ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ.

ಈ ಅಧಿವೇಶನದಲ್ಲಿ ಮುಖ್ಯವಾಗಿ ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸುಲಿಬೆಲೆಯವರು, ಹಿರಿಯ ವಕೀಲರಾದ ಅರುಣ ಶ್ಯಾಮ್ ಇವರು, ಅದಮಾರು ಮಠ ದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸಂತರಾದ ಪೂಜ್ಯ ರಮಾನಂದ ಗೌಡ ಸೇರಿದಂತೆ ನೂರಾರು ವಕೀಲರು, ವೈದ್ಯರು, ಉದ್ಯಮಿಗಳು, ಚಿಂತಕರು, ಲೇಖಕರು, ದೇವಸ್ಥಾನಗಳ ವಿಶ್ವಸ್ಥರು ಮತ್ತು ನೂರಾರು ಹಿಂದೂ ಸಕ್ರೀಯ ಕಾರ್ಯಕರ್ತರು, ವಿವಿಧ ಆಧ್ಯಾತ್ಮಿಕ, ಧಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿರುವವರು. ಈ ಅಧಿವೇಶನದಲ್ಲಿ ಭಾಗವಹಿಸಲು ಇಚ್ಛಿಸುವವರು ಈ  7204082652 ನಂಬರ್ ಗೆ ಸಂಪರ್ಕ ಮಾಡಬಹುದು.

ಪತ್ರಿಕಾ ಪರಿಷತ್ ನಲ್ಲಿ  ಉದ್ಯಮಿಗಳಾದ ಎಮ್ ಜೆ ಶೆಟ್ಟಿ, ನ್ಯಾಯವಾದಿ ಈಶ್ವರ ಕೊಟ್ಟಾರಿ,  ಹಿಂದೂ ಯುವ ಸೇನೆಯ ಅಧ್ಯಕ್ಷರಾದ ಕಿರಣ ರೈ,  ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಚಂದ್ರ ಮೊಗವೀರ್, ಹಿಂದೂ ಜನ ಜಾಗೃತಿ ಸಮಿತಿಯ ವಕ್ತಾರರಾದ ಮೋಹನ್ ಗೌಡ ಇವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular