ಬಂಟ್ವಾಳ: ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ‘ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ’ ಇದೇ ಮಾರ್ಚ್ 16 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿಸಿ ರೋಡ್ ನಲ್ಲಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ. ಈ ಹಿಂದೆ ತಾವು ಹಿಂದೂ ರಾಷ್ಟ್ರ ಅಧಿವೇಶನ ಮತ್ತು ಸಭೆಗಳಿಗೆ ನೀಡಿರುವ ಪ್ರಸಿದ್ಧಿಯಿಂದಾಗಿ ಈ ವಿಷಯ ಸಮಾಜದವರೆಗೆ ತಲುಪಿದೆ. ಇದರ ಬಗ್ಗೆ ನಾವು ತಮಗೆ ಆಭಾರಿಯಾಗಿದ್ದೇವೆ. ಇಂದಿನವರೆಗೆ ನಡೆದಿರುವ ನೂರಾರು ಅಧಿವೇಶನಗಳಿಗೆ ಪ್ರತಿವರ್ಷ ಸಿಗುವ ಪ್ರತಿಸ್ಪಂದನ ಹೆಚ್ಚುತ್ತಲೇ ಇದೆ. ಈ ಅಧಿವೇಶನದಲ್ಲಿ 1000 ಕಿಂತಲೂ ಹೆಚ್ಚಿನ ಹಿಂದುತ್ವಕ್ಕಾಗಿ ಹೋರಾಡುವ ವಕೀಲರು, ಹಿಂದುತ್ವನಿಷ್ಠ ವೈದ್ಯರು ಮತ್ತು ಧರ್ಮಪ್ರೇಮಿ ಉದ್ಯಮಿಗಳು ಭಾಗಿಯಾಗಲಿದ್ದಾರೆ.
ಭಾರತವು ಇಂದು ಆರ್ಥಿಕ ಮಹಾಶಕ್ತಿಯಾಗುವ ದೃಷ್ಟಿಯಿಂದ ಮೂರನೆಯ ಸ್ಥಾನದಲ್ಲಿ ಅಗ್ರೇಸರವಾಗಿದೆ. ಹೀಗಿರುವಾಗಲೂ ಜಗತ್ತಿನಾದ್ಯಂತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಡಿಮೆಯಾಗದೆ ಹೆಚ್ಚುತಲೆ ಇದೆ. ಹಿಂದೂಗಳು ಅತ್ಯಂತ ಶ್ರದ್ದೆಯಿಂದ ಹೋಗುವ ಕುಂಭಮೇಳದ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಹಿಂದೂಗಳನ್ನು ಮೋಸ ಮಾಡಿ ಮತಾಂತರ ಮಾಡುತ್ತಾರೆ. ಅಷ್ಟೇ ಅಲ್ಲದೆ ಭಾರತೀಯ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಲು ‘ಹಲಾಲ್ ಅರ್ಥವ್ಯವಸ್ಥೆ ನಿರ್ಮಿಸಿ ಹಿಂದೂಗಳಿಗೆ ಹಲಾಲ್ ಆಹಾರ ಪದಾರ್ಥ ಖರೀದಿಸಲು ಒತ್ತಾಯಿಸುತ್ತಾರೆ. ಇಂತಹ ಎಲ್ಲಾ ಸಮಸ್ಯೆಗಳ ಮೇಲೆ ‘ಹಿಂದೂ ರಾಷ್ಟ್ರದ ಸ್ಥಾಪನೆ ಇದು ಏಕೈಕ ಉಪಾಯವಾಗಿದೆ.