Saturday, February 15, 2025
Homeರಾಷ್ಟ್ರೀಯಪಬ್‌ಜೀ ಗೇಮ್‌ ಹುಚ್ಚು | ಆನ್‌ಲೈನ್‌ ಗೇಮ್‌ ಆಡುತ್ತಲೇ ಚಾಕು, ನೈಲ್‌ ಕಟ್ಟರ್‌, ಕೀ ಬಂಚ್‌...

ಪಬ್‌ಜೀ ಗೇಮ್‌ ಹುಚ್ಚು | ಆನ್‌ಲೈನ್‌ ಗೇಮ್‌ ಆಡುತ್ತಲೇ ಚಾಕು, ನೈಲ್‌ ಕಟ್ಟರ್‌, ಕೀ ಬಂಚ್‌ ನುಂಗಿದ ಬಾಲಕ!

ಪಾಟ್ನಾ: ಮೊಬೈಲ್ ಬಳಕೆ ಅತಿಯಾದರೆ ನಾವು ಏನು ಮಾಡುತ್ತಿದ್ದೇವೆ ಎಂಬುದು ಸರಿಯಾಗಿ ಅರಿವಿಗೆ ಇರುವುದಿಲ್ಲ. ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಅದೇ ರೀತಿ ಬಾಲಕನೊಬ್ಬ ಅತಿಯಾಗಿ ಮೊಬೈಲ್​ ನೋಡನೋಡುತ್ತಲೇ ಕೀ, ಚಾಕು ಸೇರಿದಂತೆ ಇತರೆ ಕಬ್ಬಿಣದ ವಸ್ತುಗಳನ್ನು ನುಂಗಿರುವುದು ಬೆಳಕಿಗೆ ಬಂದಿದೆ.
ಬಾಲಕನೊಬ್ಬ ಮೊಬೈಲ್​ ಫೋನ್​ನಲ್ಲಿನ ಆನ್​ಲೈನ್ ಗೇಮಿಂಗ್ ಹಾಗೂ ಸೋಶಿಯಲ್ ಮೀಡಿಯಾಗೆ ಅಡಿಕ್ಟ್ ಆಗಿದ್ದ. ಮೊಬೈಲ್ ಬಳಕೆ ಮಾಡುವಾಗ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವೇ ಆತನಿಗೆ ಇರುವುದಿಲ್ಲ ಹೀಗಾಗಿ ತನ್ನ ಪಕ್ಕದಲ್ಲಿ ಇಟ್ಟಿರುವಂತ ಕಬ್ಬಿಣದ ವಸ್ತುಗಳಾದ ಕೀ ಬಂಚ್​, 2 ಉಗುರು ಕಟ್​ ಮಾಡುವ ವಸ್ತು (ನೈಲ್ ಕಟ್ಟರ್), ಚಾಕು ಸೇರಿ ಇತರೆ ಕೆಲ ವಸ್ತುಗಳನ್ನು ನುಂಗಿದ್ದನು. ಆದರೂ ಬಾಲಕನಿಗೆ ಏನು ಆಗಿರಲಿಲ್ಲ ಎಂದು ಹೇಳಲಾಗಿದೆ.
ಮನೆಯವರು ಕೀ ಬಂಚ್ ಎಲ್ಲಿದೆ ಎಂದು ಹುಡುಕಾಡುವಾಗ ಬಾಲಕ ತಾನು ನುಂಗಿರುವುದಾಗಿ ಹೇಳಿದ್ದಾನೆ. ಮೊದಲು ಇದು ತಮಾಷೆ ಎಂದು ತಿಳಿದಿದ್ದರು. ಬಳಿಕ ಗದರಿಸಿ ಕೇಳಿದಾಗ ನಾನೇ ನುಂಗಿದ್ದಾಗಿ ಹೇಳಿದ್ದಾನೆ. ಇದರಿಂದ ಬೆಚ್ಚಿ ಬಿದ್ದ ಮನೆಯವರು ತಕ್ಷಣ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಷಣೆ ಮಾಡಿಸಿದ್ದಾರೆ. ವೈದ್ಯರು ಸೋನೋಗ್ರಫಿ ಹಾಗೂ ಅಲ್ಟ್ರಾಸೌಂಡ್ ಮೂಲಕ ಪರೀಕ್ಷೆ ಮಾಡಿದಾಗ ಬಾಲಕನ ಹೊಟ್ಟೆಯಲ್ಲಿ ಕಬ್ಬಿಣದ ವಸ್ತುಗಳು ಇರುವುದು ದೃಢವಾಗಿದೆ. ಬಳಿಕ ಸತತ ಒಂದು ಗಂಟೆ ಆಪರೇಷನ್ ಮಾಡಿ ಹೊಟ್ಟೆಯಲ್ಲಿದ್ದ ಎಲ್ಲ ಕಬ್ಬಿಣದ ವಸ್ತುಗಳನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ಡಾಕ್ಟರ್ ಅಮಿತ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ಬಾಲಕನ ತಾಯಿ ಮಾತನಾಡಿ, ಸ್ಮಾರ್ಟ್​ಫೋನ್​ಗೆ ಮಗ ಅಡಿಕ್ಟ್ ಆಗಿ ಸೋಶಿಯಲ್ ಮೀಡಿಯಾ, ಆನ್​​ಲೈನ್ ಗೇಮಿಂಗ್ ಹೆಚ್ಚಾಗಿ ಆಡುತ್ತಿದ್ದ. ವಿಡಿಯೋಸ್, ರೀಲ್ಸ್​ ಹೆಚ್ಚು ಹೆಚ್ಚಾಗಿ ನೋಡುತ್ತಿದ್ದರಿಂದ ಮೆಂಟಲಿ ವೀಕ್ ಆಗಿದ್ದ. ನಂತರ ಪಬ್​​ಜೀ ಆಡಲು ಶುರು ಮಾಡಿದನೋ ಆವಾಗಿನಿಂದ ಮೆಂಟಲಿ ಬಹಳ ವೀಕ್ ಆಗಿಬಿಟ್ಟಿದ್ದ ಎಂದು ಹೇಳಿದ್ದಾರೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ನಗರದ ಚಂಡಿಮರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular