Friday, February 14, 2025
Homeಬೆಂಗಳೂರುಮಕರ ಸಂಕ್ರಾಂತಿ ಹಿನ್ನೆಲೆ: ಸಿಂಗಸಂದ್ರದಲ್ಲಿ ಸೈಬರ್ ಅಪರಾಧ, ಡಿಜಿಟಲ್ ಅರೆಸ್ಟ್ ಕುರಿತು ಜನ ಜಾಗೃತಿ

ಮಕರ ಸಂಕ್ರಾಂತಿ ಹಿನ್ನೆಲೆ: ಸಿಂಗಸಂದ್ರದಲ್ಲಿ ಸೈಬರ್ ಅಪರಾಧ, ಡಿಜಿಟಲ್ ಅರೆಸ್ಟ್ ಕುರಿತು ಜನ ಜಾಗೃತಿ

ಬೆಂಗಳೂರು ; ಮಕರ ಸಂಕ್ರಾಂತಿ ಅಂಗವಾಗಿ ಕೂಡ್ಲು ಸಿಂಗ ಸಂದ್ರದ ಎ ಇ ಸಿ ಎಸ್ ಲೇ ಔಟ್ ” ಎ ” ಬ್ಲಾಕ್ ನ ಮಹಾಗಣಪತಿ ಪಾರ್ಕ್ ನಲ್ಲಿ ಆಯೋಜಿಸಿದ್ದ ಸೈಬರ್ ಅಪರಾಧ ಕುರಿತು ಜನ ಜಾಗೃತಿ, ಸಾಂಸ್ಕೃತಿಕ ಕಾರ್ಯಕ್ರಮವನ್ನು ನ್ಯೂಸ್ ಏಜ್ ಹೆರಾಲ್ಡ್ ಪತ್ರಿಕೆ ಸಂಪಾದಕ ಎನ್.ಎ. ಚೌಧರಿ ಕಾರ್ಯಕ್ರಮ ಉದ್ಘಾಟಿಸಿದರು.

ಇತ್ತೀಚಿನ ದಿನಗಳಲ್ಲಿ ಯುವ ಸಮೂಹ, ಹಿರಿಯ ನಾಗರಿಕರನ್ನು ವಿವಿಧ ರೀತಿಯಲ್ಲಿ ಸೈಬರ್ ಅಪರಾಧಗಳು, ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ ಮತ್ತಿತರೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಯಾಮಾರಿಸುವ ಕುರಿತು ಎಸಿಪಿ ಡಾ. ಗೋವಿಂದ್ರನ್ ಗೋಪಾಲ್ ನೇತೃತ್ವದ ಸೈಬರ್ ಪರಿಣಿತರ ತಂಡ ಅತ್ಯಂತ ಉಪಯುಕ್ತ ಮಾಹಿತಿ ನೀಡಿತು.

ಇಡೀ ದಿನ ಯಕ್ಷಗಾನ, ಸಿಪಿಆರ್ ತರಬೇತಿ, ಉಚಿತ ವೈದ್ಯಕೀಯ ಶಿಬಿರ, ಅಗ್ನಿಶಾಮಕ ಕವಾಯತು, ಸಿಲಿಂಡರ್ ಸ್ಪೋಟದ ಬಗ್ಗೆ ಮುಂಜಾಗ್ರತಾ ಕ್ರಮಗಳು, ಮಕ್ಕಳಿಗಾಗಿ ಚಿತ್ರಕಲೆ, ರಂಗೋಲಿ ಸ್ಪರ್ಧೆ, ನೃತ್ಯ ಹಾಗು ಗಾಯನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಮಹಾಲಕ್ಷ್ಮಿ ಮತ್ತು ಲೋಕೇಶ್ ಅವರು ಪ್ರೋತ್ಸಾಹ ನೀಡಿದರು. ಜೀವನಶೈಲಿ ಮತ್ತು ಯೋಗಕ್ಷೇಮ ನಿರ್ವಹಣಾ ತಜ್ಞರಾದ ಡಾ. ಮಾನಸ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular