ಮುಲ್ಕಿ: ಒಂಬತ್ತು ಮಾಗಣೆಯ ಶಿಮಂತೂರು ಆದಿ ಜನಾರ್ಧನ ದೇವಸ್ಥಾನದಲ್ಲಿ ಸರ್ವ ಜನರ ಸಕಲ ದುರಿತ ನಿವಾರಣಾ ನಿಮಿತ್ತ ಲೋಕಕಲ್ಯಾಣಾರ್ಥವಾಗಿ ಅಗಸ್ಟ್ 17 ಶನಿವಾರ ಸಿಂಹ ಸಂಕ್ರಮಣದ ಶುಭದಿನದಂದು ಶ್ರೀ ಆದಿ ಜನಾರ್ಧನ ದೇವರಿಗೆ “ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ” ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಎಂಟು ಕ್ಷೇತ್ರದ ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಲಕ್ಷ ತುಳಸಿ ಅರ್ಚನೆಗೆ ಚಾಲನೆ ನೀಡಲಾಯಿತು.
ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ,ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಿತು
ಈ ಸಂದರ್ಭ ಕ.ಸಾ.ಪ.ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಕರುಣಾಕರ ಶೆಟ್ಟಿ ಶಿಮಂತೂರು ಬಾವ, ಪ್ರಸಾದ್ ಶೆಟ್ಟಿ ಮುಂಬೈ ಅತಿಕಾರಿಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಮನೋಹರ ಕೋಟ್ಯಾನ್,ಸದಸ್ಯರಾದ ಪದ್ಮಿನಿ ವಿಜಯ್ ಕುಮಾರ್, ಮಮತಾ ಶೆಟ್ಟಿ, ಶೆಟ್ಟಿ,ಆಡಳಿತಾಧಿಕಾರಿ ಇಂದು ಎಂ,
ಮಾಜೀ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ,ಮಾಜೀ ಸದಸ್ಯರಾದ ಚಂದ್ರಹಾಸ ಸುವರ್ಣ,
ಎಸ್.ಎಚ್.ವಿಶ್ವನಾಥ ಶೆಟ್ಟಿ, ದಿನೇಶ್ಚಂದ್ರ ಅಜಿಲ,ಹರೀಶ್ ಶೆಟ್ಟಿ,ಕಲ್ಪನಾ ಬಲ್ಲಾಳ್,ಉದಯ ಕುಮಾರ್ ಶೆಟ್ಟಿ ಆಧಿಧನ್,ಮೋಹನ್ ದಾಸ್ ಶೆಟ್ಟಿ,ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಮೋಹನ್ ಕೋಟ್ಯಾನ್,ರಂಗನಾಥ ಶೆಟ್ಟಿ, ರಾಘು ಶೆಟ್ಟಿ ಲಾಯಿದೆಮನೆ,ಸುಧೀರ್ ಶೆಟ್ಟಿ, ಶಿಮಂತೂರು ಯುವಕ ಮಂಡಲ ಹಾಗೂ ಮಹಿಳಾ ಭಜನಾ ಮಂಡಳಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
ಶಿಮಂತೂರು ಆದಿ ಜನಾರ್ಧನ ದೇವಸ್ಥಾನದಲ್ಲಿ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ”
RELATED ARTICLES