Sunday, July 14, 2024
Homeಶಿಕ್ಷಣದ್ವಿತೀಯ ಪಿಯುಸಿ ಪರೀಕ್ಷೆ – 3 ಫಲಿತಾಂಶ ಪ್ರಕಟ: ಶೇ. 35.25 ಫಲಿತಾಂಶ ದಾಖಲು

ದ್ವಿತೀಯ ಪಿಯುಸಿ ಪರೀಕ್ಷೆ – 3 ಫಲಿತಾಂಶ ಪ್ರಕಟ: ಶೇ. 35.25 ಫಲಿತಾಂಶ ದಾಖಲು

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಿರುವ ಫಲಿತಾಂಶದಲ್ಲಿ ಶೇ. 35.25 ಫಲಿತಾಂಶ ದಾಖಲಾಗಿದೆ.

ಏ. 29ರಿಂದ ಮೇ 16ರ ವರೆಗೆ ಪರೀಕ್ಷೆಗಳು ನಡೆದಿದ್ದವು. ಇಲಾಖೆ ವೆಬ್ ಸೈಟ್ http://karresults.nic.in ನಲ್ಲಿ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಗೆ 1,48,942 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 52,505 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

26,496 ಬಾಲಕರು ಮತ್ತು 26,009 ಬಾಲಕಿಯರು ಪಾಸ್ ಆಗಿದ್ದಾರೆ. ಉತ್ತರ ಪತ್ರಿಕೆ ಸ್ನ್ಯಾನಿಂಗ್ ಪ್ರತಿಗೆ ಅರ್ಜಿ ಸಲ್ಲಿಕೆಗೆ ಮೇ 23 ಕೊನೆಯ ದಿನವಾಗಿದ್ದು, ಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಕೆಗೆ ಮೇ 25 ಕೊನೆಯ ದಿನವಾಗಿದೆ.

ಪರೀಕ್ಷೆ 3ಕ್ಕೆ ಪರೀಕ್ಷಾ ಶುಲ್ಕ ಪಾವತಿ ದಿನಾಂಕ ಕೊನೆ ದಿನ ದಂಡ ರಹಿತ ಮೇ 23ರಿಂದ ಮೇ 28 ಹಾಗೂ ಮೇ 29ರಿಂದ ಮೇ 30ರ ವರೆಗೆ ದಂಡ ಸಹಿತ ಶುಲ್ಕ ಪಾವತಿ ಮಾಡಬೇಕಾಗಿದೆ. ಜೂ. 26ರಿಂದ ಜುಲೈ 5ರವರೆಗೆ ಪರೀಕ್ಷೆ ನಡೆಯಲಿದೆ.

RELATED ARTICLES
- Advertisment -
Google search engine

Most Popular