ಗುಂಡ್ಮಿ ವೈದಿಕ ಆಶ್ರಮದಲ್ಲಿ ಸಮಗ್ರ ರುದ್ರೈಕಾದಶಿನೀ ಹೋಮದ ಪುನರ್ ಹುತಿಯು ದಿನಾಂಕ 05.03.2025ನೇ ಬುಧವಾರ ನಡೆಯಲಿದೆ.
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಕೃಪಾಶೀರ್ವಾದದಿಂದ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ದಿವ್ಯ ಸಾನಿಧ್ಯದಲ್ಲಿ ಸಂಪನ್ನಗೊಳ್ಳಲಿದೆ. ಮಧ್ಯಾಹ್ನ 11:30 ಗಂಟೆಗೆ ಶ್ರೀ ಸನ್ನಿಧಾನಂಗಳವರು ಆಸ್ತಿಕ ಭಕ್ತ ಮಹಾಜನರಿಗೆ ಅನುಗ್ರಹ ಆಶೀರ್ವಾದ ಮಾಡುವವರಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಗುರುಭಕ್ತರಾದ ತಾವೆಲ್ಲರೂ ಭಕ್ತಿಯಿಂದ ಭಾಗವಹಿಸಿ. ಹಲವು ವರ್ಷಗಳ ನಂತರ ನಮ್ಮೂರಿಗೆ ಶ್ರೀ ಶಾರದಾ ಚಂದ್ರಮೌಳೀಶ್ವರ ದೇವರ ಸಹಿತರಾಗಿ ದಿವ್ಯ ಪಾದಾರ್ಪಣೆ ಮಾಡುತ್ತಿರುವ ಶ್ರೀ ಶ್ರೀ ಸನ್ನಿಧಾನಂಗಳವರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ. ಸಮಸ್ತ ಅಪೇಕ್ಷಿತ ಭಕ್ತರಿಗೆ ಶ್ರೀ ಗುರುಗಳ ಪಾದಪೂಜೆ ಮತ್ತು ಭಿಕ್ಷಾವಂದನೆಗೆ ಅವಕಾಶವಿರುತ್ತದೆ ಹಾಗೂ ಮಧ್ಯಾಹ್ನ 1:00ಕ್ಕೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಜರುಗಲಿದೆ.