Sunday, February 16, 2025
Homeಮುಲ್ಕಿಪುನರೂರು ಪ್ರತಿಷ್ಠಾನದ ವತಿಯಿಂದ "ಪುನರೂರು ಸಂಭ್ರಮ"ಕಾರ್ಯಕ್ರಮ

ಪುನರೂರು ಪ್ರತಿಷ್ಠಾನದ ವತಿಯಿಂದ “ಪುನರೂರು ಸಂಭ್ರಮ”ಕಾರ್ಯಕ್ರಮ

ಮುಲ್ಕಿ: ಪುನರೂರು ಪ್ರತಿಷ್ಠಾನದ ವತಿಯಿಂದ “ಪುನರೂರು ಸಂಭ್ರಮ”ಕಾರ್ಯಕ್ರಮ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ವಠಾರದಲ್ಲಿ ಶನಿವಾರ ನಡೆಯಿತು
ಕಾರ್ಯಕ್ರಮವನ್ನು ಕಟೀಲು ಕ್ಷೇತ್ರದ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿ ಆಶೀರ್ವಚನ ನೀಡಿ ಪುನರೂರು ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ನೀಡುವ ಕೆಲಸವಾಗಿದ್ದು ನಿರಂತರವಾಗಿರಲಿ ಎಂದು ಆಶೀರ್ವಚನ ನೀಡಿದರು
ಅಧ್ಯಕ್ಷತೆಯನ್ನು ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ದರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು
ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಅತುಲ್ ಕುಡ್ವ ಶುಭಾಶಂಸನೆಗೈದರು
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಸುರತ್ಕಲ್ ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ವಿ. ಚಂದ್ರಶೇಖರ ನಾವಡ, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ,ಪುನರೂರು ಕ್ಷೇತ್ರದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್,ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್ ಕೆ ಉಷಾರಾಣಿ , ಅಧ್ಯಕ್ಷ ದೇವಪ್ರಸಾದ್ ಪುನರೂರು,ಪ್ರಧಾನ ಕಾರ್ಯದರ್ಶಿ
ಶ್ರೇಯಾ ಪುನರೂರು ಜನವಿಕಾಸ ಸಮಿತಿ ಅಧ್ಯಕ್ಷ ಶಶಿಕರ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು
ದೇವಪ್ರಸಾದ್ ಪುನರೂರು ಸ್ವಾಗತಿಸಿದರು, ಗೀತಾ ಶೆಟ್ಟಿ, ಧನ್ಯವಾದ ಅರ್ಪಿಸಿದರು. ಜಿತೇಂದ್ರ ವಿ.ರಾವ್ ಹೆಜಮಾಡಿ ನಿರೂಪಿಸಿದರು.ಬಳಿಕ ಪ್ರತಿಭಾ ಸೌರಭ 2024 ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸುರತ್ಕಲ್ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ವತಿಯಿಂದ ನೃತ್ಯ ಕೌಸ್ತುಭ ಕಾರ್ಯಕ್ರಮ ನಡೆಯಿತು

RELATED ARTICLES
- Advertisment -
Google search engine

Most Popular