Monday, December 2, 2024
Homeಮುಂಬೈಪುಣೆ: ಟಾರ್ಗೆಟ್​ ತಲುಪೋ ಭರದಲ್ಲಿ ಒತ್ತಡದಿಂದ ಕೆಲಸ ಮಾಡಿ ಯುವತಿಯ ಸಾವು!

ಪುಣೆ: ಟಾರ್ಗೆಟ್​ ತಲುಪೋ ಭರದಲ್ಲಿ ಒತ್ತಡದಿಂದ ಕೆಲಸ ಮಾಡಿ ಯುವತಿಯ ಸಾವು!

ಕಂಪೆನಿ ಮಾಡಿದ್ದೇನು ನೋಡಿ
ರ್ಗೆಟ್​, ಡೆಡ್​ಲೈನ್​. ಇದು ಬಹುತೇಕ ಸಂಸ್ಥೆ, ಕಂಪೆನಿಗಳಲ್ಲಿ ಸಾಮಾನ್ಯವಾಗಿದೆ. ಇಂತಿಷ್ಟು ಸಮಯದಲ್ಲಿ ಇಂತಿಷ್ಟು ಟಾರ್ಗೆಟ್​ ಆಗಬೇಕು, ನಿಮಗೆ ಇರುವ ಡೆಡ್​ಲೈನ್​ ಇಷ್ಟೇ… ಈ ಟೈಮ್​ನಲ್ಲಿ ಇಷ್ಟು ಗುರಿ ತಲುಪಬೇಕು, ಏನಾದರೂ ಸೈ. ಮಾಡಲೇಬೇಕು ಎನ್ನುವ ಟಾರ್ಗೆಟ್​ ಅನ್ನು ಹಲವು ಸಂಸ್ಥೆ, ಕಂಪೆನಿಗಳು ಉದ್ಯೋಗಿಗಳಿಗೆ ನೀಡಿರುತ್ತವೆ.
ಅದರಲ್ಲಿಯೂ ಹೊಸದಾಗಿ ಸೇರಿರುವ ಉದ್ಯೋಗಿಗಳ ಮೇಲೆ ಈ ವರ್ಕ್​ ಪ್ರೆಷರ್​ ಹೆಚ್ಚಾಗಿರುತ್ತದೆ. ಹಲವು ಬಾರಿ ಕಂಪೆನಿಗಳೇ ಟಾರ್ಗೆಟ್​ ಕೊಟ್ಟರೆ, ಮತ್ತೆ ಕೆಲವು ಬಾರಿ ಉದ್ಯೋಗಿಗಳೇ ಬಾಸ್​ ಕಡೆಯಿಂದ ಭೇಷ್​ ಎನ್ನಿಸಿಕೊಳ್ಳಬೇಕು ಎನ್ನುವ ಭರದಲ್ಲಿ ಓವರ್​ ಟೈಮ್​ ಕೆಲಸ ಮಾಡಿ, ಒತ್ತಡದಿಂದ ಇದ್ದ ಶ್ರಮವನ್ನೆಲ್ಲಾ ಹಾಕಿಬಿಡುತ್ತಾರೆ. ಇದೇ ರೀತಿ ಒತ್ತಡದಿಂದ ಕೆಲಸ ಮಾಡಿದ 26 ವರ್ಷದ ಯುವತಿಯೊಬ್ಬರ ಪ್ರಾಣ ಪಕ್ಷಿಯೇ ಹಾರಿಹೋಗಿರುವ ಶಾಕಿಂಗ್​ ಸುದ್ದಿ ಪುಣೆಯಲ್ಲಿ ನಡೆದಿದೆ.

ಸಿ.ಎ ಆಗಿದ್ದ ಈ ಯುವತಿಯ ಅಮ್ಮನ ಪ್ರಕಾರ, ಕಂಪೆನಿಯಲ್ಲಿ ನೀಡಿರುವ ಟಾರ್ಗೆಟ್​ ಮುಟ್ಟಲು ಹಗಲು ರಾತ್ರಿ ಈಕೆ ಕಷ್ಟಪಟ್ಟು ಕೆಲಸ ಮಾಡಿದ್ದೇ ಕಾರಣ. ಕೆಲಸಕ್ಕೆ ಸೇರಿ ನಾಲ್ಕೇ ತಿಂಗಳಿನಲ್ಲಿ ಈ ದುರಂತ ನಡೆದಿದೆ. ಜೀವ ಕಳೆದುಕೊಂಡಿರೋ ಯುವತಿಯ ಹೆಸರು ಅನ್ನಾ ಸೆಬಾಸ್ಟಿಯನ್ ಪೆರಾಯಿಲ್. ದೇಶದ ಅತಿ ದೊಡ್ಡ ಅಕೌಂಟಿಂಗ್ ಸಂಸ್ಥೆಗಳಲ್ಲಿ ಒಂದು ಎನಿಸಿರುವ ಇವೈ ಪುಣೆಯಲ್ಲಿ ಅನ್ನಾ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿರೋ ನಾಲ್ಕು ತಿಂಗಳಿನಲ್ಲಿಯೇ ಈಕೆ ಸಾವನ್ನಪ್ಪಿದ್ದಾರೆ. ಇನ್ನೂ ದುರಂತದ ಸಂಗತಿ ಎಂದರೆ,, ಆಕೆಯ ಅಂತ್ಯಕ್ರಿಯೆಗೆ ಕಂಪೆನಿಯ ಒಬ್ಬರೇ ಒಬ್ಬರು ಅಧಿಕಾರಿಗಳು ಬರಲಿಲ್ಲ ಎನ್ನುವುದು!
ಮಗಳ ಸಾವಿನ ಶಾಕಿಂಗ್​ ಕಾರಣವನ್ನು ಆಕೆಯ ಅಮ್ಮ ತೆರೆದಿಟ್ಟಿದ್ದಾರೆ. ಕಂಪನಿಗೆ ಸೇರಿದ ದಿನದಿಂದ ಆಕೆಗೆ ವಿಪರೀತ ಕೆಲಸ ನೀಡಲಾಗಿತ್ತು. ಅನ್ನಾ 2023 ರಲ್ಲಿ CA ಪರೀಕ್ಷೆಗಳನ್ನು ಉತ್ತೀರ್ಣರಾಗಿದ್ದರು. ಮಾರ್ಚ್ 2024 ರಲ್ಲಿ EY ಪುಣೆಗೆ ಕಾರ್ಯನಿರ್ವಾಹಕರಾಗಿ ಸೇರಿದರು. ಇದು ಆಕೆಯ ಮೊದಲ ಕೆಲಸವಾಗಿತ್ತು. ಆಕೆಗೂ ಕೆಲಸ ಮಾಡುವ ಉಮೇದು ಇತ್ತು. ಇದನ್ನೇ ಕಂಪೆನಿ ಬಂಡವಾಳ ಮಾಡಿಕೊಂಡಿದೆ. ಆಕೆಗೆ ವಿಪರೀತ ಕೆಲಸ ಕೊಟ್ಟು ಟಾರ್ಗೆಟ್​ ನೀಡಲಾಗಿತ್ತು. ಇದರಿಮದ ಮಗಳು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಕುಸಿದು ಹೋಗಿದ್ದಳು ಎಂದು ತಾಯಿ ಹೇಳಿದ್ದಾರೆ.

ಮಗಳು ದಿನವೂ ದಣಿದು ಮನೆಗೆ ಬರುತ್ತಿದ್ದಳು. ಕೆಲವೊಮ್ಮೆ ತನ್ನ ಬಟ್ಟೆಗಳನ್ನು ಬದಲಾಯಿಸದೆ ಹಾಸಿಗೆಯ ಮೇಲೆ ಕುಸಿದು ಬೀಳುತ್ತಿದ್ದಳು. ಟಾರ್ಗೆಟ್​ ರೀಚ್​ ಆಗಲು ತುಂಬಾ ಶ್ರಮಿಸುತ್ತಿದ್ದಳು. ಅವಳು ಹೋರಾಟಗಾರ್ತಿ, ಸುಲಭವಾಗಿ ಬಿಟ್ಟುಕೊಡುತ್ತಿರಲಿಲ್ಲ. ಕೆಲಸ ಬಿಡುವಂತೆ ಹೇಳಿದರೂ ಕೇಳಲಿಲ್ಲ ಎಂದು ದುಃಖಿತರಾಗಿದ್ದಾರೆ ತಾಯಿ. “ಅತಿಯಾದ ಕೆಲಸದ ಹೊರೆಯಿಂದಾಗಿ ಅನೇಕ ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ. ಆದರೆ ಮಗಳು ಎಷ್ಟೇ ಕಷ್ಟವಾದರೂ ಕೆಲಸ ಮುಂದುವರೆಸಿದಳು. ಕಂಪೆನಿಯ ಕೆಲಸದ ಜೊತೆ ಆಕೆಗೆ ಇತರ ಕೆಲಸಗಳನ್ನೂ ನೀಡಲಾಗಿತ್ತು. ಇದರಿಂದಾಗಿ ಅನ್ನಾ ತಡರಾತ್ರಿಯವರೆಗೆ ಮತ್ತು ವಾರಾಂತ್ಯದಲ್ಲಿಯೂ ಕೆಲಸ ಮಾಡುತ್ತಿದ್ದಳು. ಒಮ್ಮೆ ತಡರಾತ್ರಿಯವರೆಗೂ ಕೆಲಸ ಮಾಡಿದರೂ ಬೆಳಿಗ್ಗೆ ಬೇಗ ಕರೆಯಲಾಗಿತ್ತು. ಅವಳಿಗೆ ವಿಶ್ರಾಂತಿ ಅಥವಾ ಚೇತರಿಸಿಕೊಳ್ಳಲು ಯಾವುದೇ ಸಮಯವೇ ಇರಲಿಲ್ಲ. ಈ ಬಗ್ಗೆ ಮಗಳು ಕಂಪೆನಿಯಲ್ಲಿ ಹೇಳಿದಾಗ ವಜಾ ಮಾಡುವುದಾಗಿ ಬೆದರಿಸಿದರು. ಆದ್ದರಿಂದ ಅವಳು ಎಲ್ಲವನ್ನೂ ಸಹಿಸಿಕೊಂಡು ಕೆಲಸ ಮಾಡುತ್ತಿದ್ದಳು ಎಂದು ತಾಯಿ ಮಗಳ ಸಾವಿನ ಕುರಿತು ಹೇಳಿದ್ದಾರೆ. ಜೊತೆಗೆ, ಸಂಪೂರ್ಣ ಮಾಹಿತಿಯನ್ನು ಪತ್ರ ಮುಖೇನ ಕಂಪೆನಿಗೂ ಕಳುಹಿಸಿ, ಇತರ ಉದ್ಯೋಗಿಗಳ ಜೀವ ಕಾಪಾಡುವಂತೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular