ವಿಟ್ಲ: ನಿರ್ಮಾಣ ಹಂತದ ಸೇತುವೆ ಕುಸಿತು ಏಳು ಮಂದಿ ಗಾಯಗೊಂಡ ಘಟಟನೆ ನಡೆದಿದೆ. ವಿಟ್ಲದ ಪುಣಚ ಗ್ರಾಮದ ಬರೆಂಜ-ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪಾಡಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದ ಸೇತುವೆ ಕುಸಿದಿದೆ.
ಸೇತುವೆಯ ಕೊನೆಯ ಹಂತದ ಕಾರ್ಯವಾಗಿ ಕಾಂಕ್ರಿಟ್ ಮಿಕ್ಸ್ ಹಾಕುತ್ತಿದ್ದ ವೇಳೆ ನಿರ್ಮಾಣ ಹಂತದ ಸೇತುವೆ ಏಕಾಏಕಿ ಕುಸಿದಿದೆದೆ. ಸೇತುವೆಯ ತಳ ಭಾಗದಿಂದ ನೀಡಿದ ರಾಡ್ ಜಾರಿ ಮೇಲ್ಭಾಗ ಸಂಪೂರ್ಣ ಕುಸಿದು ಬಿದ್ದಿದೆ.
ಸೇತುವೆ ಸಾಮಾಗ್ರಿಯ ನಡುವೆ ಒಬ್ಬ ಸಿಕ್ಕಿಕೊಂಡಿದ್ದಾನೆ. ಕಾರ್ಯಾಚರಣೆಯ ಬಳಿಕ ಆತನನ್ನು ರಕ್ಷಿಸಲಾಗಿದೆ. ಇತರ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಏಳು ಮಂದಿಯನ್ನು ತಕ್ಷಣವೇ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.