ಶಿವಪುರ : ಮಾಹೆ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ನಲ್ಲಿ ವಾಣಿಜ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಪುರ ಮುರ್ಸಾಲು ಪುಷ್ಪರಾಜ್ ಎಂ ನಾಯಕ್ ಅವರಿಗೆ ಮಾಹೆಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಮಾಹೆ ಮಣಿಪಾಲದ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಹರೀಶ್ ಜಿ. ಜೋಶಿ ಪಿಎಚ್‌ಡಿ ಪದವಿ ಪ್ರಧಾನ ಮಾಡಿದರು. ಪುಷ್ಪರಾಜ್ ಎಂ ನಾಯಕ್ದ್ಯ ಮಶೀಲತಾ ಉದ್ದೇಶವನ್ನು ನಿರ್ಮಿಸುವಲ್ಲಿ ಉದ್ಯಮಶೀಲತೆಯ ಶಿಕ್ಷಣದ ಶೀರ್ಷಿಕೆಯ ಅನುಭವದ ಕಲಿಕೆ ಮತ್ತು ಸಾಂಪ್ರದಾಯಿಕ ಕಲಿಕೆಯ ಕುರಿತು ಪಿಎಚ್‌ಡಿ ಪದವಿಯನ್ನು ಪಡೆದಿದ್ದು ಮಾಹೆ ಮಣಿಪಾಲದ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಹರೀಶ್ ಜಿ. ಜೋಶಿ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಅಧ್ಯಯನ ಮಾಡಿದ್ದಾರೆ. ಪುಪ್ಪರಾಜ್ ಎಂ.ನಾಯಕ್ ಸಾಧನೆಗೆ ತಂದೆ ಶಿವಪುರ ಮುರ್ಸಾಲು ಮೋಹನದಾಸ ನಾಯಕ್ ಮತ್ತು ತಾಯಿ ಶಕುಂತಳಾ ನಾಯಕ್ ಹಾಗೂ ಕುಟುಂಬಸ್ಥರು. ಚಿಕ್ಕಪ್ಪನವರಾದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಮೂರ್ಸಾಲು ಗೋಕುಲದಾಸ ನಾಯಕ್ ಅಭಿನಂದನೆ ಸಲ್ಲಿಸಿದ್ದಾರೆ.