Wednesday, July 24, 2024
Homeರಾಷ್ಟ್ರೀಯಪುರಿ ಜಗನ್ನಾಥ ದೇವಾಲಯದ ನಾಲ್ಕು ದ್ವಾರಗಳನ್ನೂ ತೆರೆದ ಬಿಜೆಪಿ ಸರ್ಕಾರ: ಚುನಾವಣಾ ಪೂರ್ವ ಭರವಸೆ ಮೊದಲು...

ಪುರಿ ಜಗನ್ನಾಥ ದೇವಾಲಯದ ನಾಲ್ಕು ದ್ವಾರಗಳನ್ನೂ ತೆರೆದ ಬಿಜೆಪಿ ಸರ್ಕಾರ: ಚುನಾವಣಾ ಪೂರ್ವ ಭರವಸೆ ಮೊದಲು ಈಡೇರಿಸಿದ ನೂತನ ಸಿಎಂ ಮಾಂಝಿ

ಭುವನೇಶ್ವರ: ಪುರಿಯ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಇಂದು ತೆರೆಯಲಾಗಿದೆ. ಆ ಮೂಲಕ ಬಿಜೆಪಿ ಚುನಾವಣಾ ಪೂರ್ವ ನೀಡಿದ್ದ ಭರವಸೆಯೊಂದನ್ನು ಅಧಿಕಾರಕ್ಕೆ ಕೂಡಲೇ ಈಡೇರಿಸಿದೆ.
ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಂಝಿ, ಪುರಿ ಸಂಸದ ಸಂಬಿತ್‌ ಪಾತ್ರ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ದೇವಾಲಯದ ಬಾಗಿಲು ತೆರೆಯುವ ಮಹತ್ವದ ಕಾರ್ಯದಲ್ಲಿ ಭಾಗಿಯಾದರು.
ಕೋವಿಡ್‌ ಸಂದರ್ಭದಲ್ಲಿ ಮುಚ್ಚಲ್ಪಟ್ಟಿದ್ದ ದ್ವಾರಗಳನ್ನು ಮತ್ತೆ ತೆರೆಯುವ ಬಗ್ಗೆ ತಮ್ಮ ಮೊದಲ ಕ್ಯಾಬಿನೆಟ್‌ ಸಭೆಯಲ್ಲಿ ಮುಖ್ಯಮಂತ್ರಿ ಮಾಂಝಿ ಅವರು ನಿರ್ಣಯ ಕೈಗೊಂಡರು. ಅಲ್ಲದೆ ದೇವಸ್ಥಾನದ ಅಭಿವೃದ್ಧಿಗೆ ಸುಮಾರು 500 ಕೋಟಿ ರೂ. ವಿಶೇಷ ಪ್ಯಾಕೇಜ್‌ ಘೋಷಿಸಿದರು.
ಪುರಿಯ ಜಗನ್ನಾಥ ದೇವಾಲಯದಲ್ಲಿ ನಾಲ್ಕು ದ್ವಾರಗಳಿವೆ. ಸಿಂಹದ್ವಾರ, ಅಶ್ವದಾರ, ವ್ಯಾಫ್ರದ್ವಾರ ಮತ್ತು ಹಸ್ತಿದ್ವಾರ ಎಂಬ ನಾಲ್ಕು ದ್ವಾರಗಳು ಪುರಿ ಜಗನ್ನಾಥ ದೇವಾಲಯದಲ್ಲಿದೆ. ಕೋವಿಡ್‌ ವೇಳೆ ಈ ದ್ವಾರಗಳನ್ನು ಬಂದ್‌ ಮಾಡಲಾಗಿತ್ತು. ಆ ಬಳಿಕ ಸಿಂಹದ್ವಾರದಲ್ಲಿ ಮಾತ್ರ ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿತ್ತು. ಇದರಿಂದ ಜನದಟ್ಟಣೆ ಉಂಟಾಗಿ ಭಕ್ತರು ಸಂಕಷ್ಟಪಡಬೇಕಾಗಿತ್ತು. ಹೀಗಾಗಿ ದೇವಾಲಯದ ನಾಲ್ಕು ದ್ವಾರಗಳನ್ನೂ ತೆರೆಯುವುದಾಗಿ ಬಿಜೆಪಿ ಚುನಾವಣಾ ಪೂರ್ವ ಭರವಸೆಯನ್ನು ನೀಡಿತ್ತು.

RELATED ARTICLES
- Advertisment -
Google search engine

Most Popular