Thursday, April 24, 2025
HomeUncategorizedಪುಷ್ಪ ಪ್ರಸಾದ್ ರವರಿಗೆ ಡಾ. ಶಿವರಾಮ ಕಾರಂತ ಸಾಧಕಾಶ್ರೀ ಮಹಿಳಾ ಪುರಸ್ಕಾರ

ಪುಷ್ಪ ಪ್ರಸಾದ್ ರವರಿಗೆ ಡಾ. ಶಿವರಾಮ ಕಾರಂತ ಸಾಧಕಾಶ್ರೀ ಮಹಿಳಾ ಪುರಸ್ಕಾರ

ಡಾ!! ಶಿವರಾಮ ಕಾರಂತ ಪ್ರತಿಷ್ಠಾನ (ರಿ), ಕೋಟ ಕೋಟತಟ್ಟು ಗ್ರಾಮ ಪಂಚಾಯತ್, ಕೋಟ ಇವರಿಂದ
ದಿನಾಂಕ :08-03-2025 ಅಂತರ ರಾಷ್ಟೀಯ ಮಹಿಳಾ ದಿನಾಚರಣೆ ಅಂವಾಗಿ ನೀಡಲಾಗುವ ನಾಲ್ಕನೇ ವರ್ಷದ ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಸಾಧಕ ಸ್ತ್ರೀ ಮಹಿಳಾ ಪುರಸ್ಕಾರವನ್ನು ಶಿವರಾಮ ಕಾರಂತ ಥೀಮ್ ಪಾರ್ಕ್ ವೇದಿಕೆಯಲ್ಲಿ ಗೌರವಾನ್ವಿತ ಗಣ್ಯರ ಸಮ್ಮುಖದಲ್ಲಿ ಶ್ರೀಮತಿ ಪುಷ್ಪ ಪ್ರಸಾದ್ ಉಡುಪಿ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪುಷ್ಪ ಪ್ರಸಾದ್ ಇವರು ಈಗಾಗಲೇ ಮೂರು ಕವನ ಸಂಕಲನ, ಎರೆಡು ಕಥಾ ಸಂಕಲನ ಹಾಗೂ ಲೇಖನ ಸಂಕಲನವನ್ನು ಪ್ರಕಟಿಸಿ ಕನ್ನಡಮ್ಮನ ಮಡಿಲಿಗೆ ಸೇರಿಸಿರುತ್ತಾರೆ, ಅಲ್ಲದೇ ಇವರು ಹಲವಾರು ಪ್ರಶಸ್ತಿ ಗಳನ್ನು ತನ್ನ ಮುಡಿಗೇರಿಸಿಕೊಂಡಿರುತ್ತಾರೆ. ಇವರು ಬರಹಗಾರರ ಸಂಘ (ರಿ) ರಾಜ್ಯ ಘಟಕ ಹೂವಿನ ಹಡಗಲಿ, ಜಿಲ್ಲಾ ಘಟಕ, ಉಡುಪಿ ಇದರ ಅಧ್ಯಕ್ಷೆಯಾಗಿಯೂ, ಸಿರಿಗನ್ನಡ ಮಹಿಳಾ ಘಟಕ ಉಡುಪಿ ಜಿಲ್ಲಾಧ್ಯಕ್ಷೆಯಾಗಿಯೂ, ಗುರುಕುಲ ಪ್ರತಿಷ್ಠಾನ ಉಡುಪಿ ಜಿಲ್ಲೆಯ ಗೌರವ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಆಮಂತ್ರಣ ಪರಿವಾರ ಉಡುಪಿ ಜಿಲ್ಲೆಯ ಅಧ್ಯಕ್ಷೆಯಾಗಿ ಆಯ್ಕೆಗೊಂಡಿರುತ್ತಾರೆ. ಇವರು ಪ್ರತಿಲಿಪಿ ಕನ್ನಡದ ಸಕ್ರೀಯ ಸಾಹಿತಿಯೂ ಹೌದು, ಯುವರ್ ಕ್ವೋಟ್ ಮತ್ತು ಸ್ಟೋರಿ ಮಿರರ್ ನ ಸಕ್ರೀಯ ಬರಹಗಾರ್ತಿಯೂ ಹೌದು. ಇವರು ಪ್ರಸ್ತುತ ಉಡುಪಿ ಜಿಲ್ಲಾ ನ್ಯಾಯಾಂಗ ಇಲಾಖೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

ವರದಿ: ಸುರೇಶ್ ಕುಮಾರ್ ಚಾರ್ವಕ

RELATED ARTICLES
- Advertisment -
Google search engine

Most Popular