Saturday, April 19, 2025
Homeರಾಷ್ಟ್ರೀಯತಾಯಿ ಹಚ್ಚಿದ ಅಗರಬತ್ತಿಯಿಂದ ಪುಟ್ಟಕಂದಮ್ಮ ಮೃತ್ಯು

ತಾಯಿ ಹಚ್ಚಿದ ಅಗರಬತ್ತಿಯಿಂದ ಪುಟ್ಟಕಂದಮ್ಮ ಮೃತ್ಯು

ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ಅದು ಕಡಿಮೆಯಾಗಬೇಕೆ ಎಂಬ ನಂಬಿಕೆಯಿಂದ ತಾಯಿಯೊಬ್ಬಳು ತನ್ನ ಏಳು ತಿಂಗಳ ಮಗುವಿಗೆ ಅಗರಬತ್ತಿಯಿಂದ ಸುಟ್ಟು ಬಳಿಕ ಮನೆಯಲ್ಲಿಯೇ ಕೈ ಚಿಕಿತ್ಸೆ ಮಾಡಿದ ಪರಿಣಾಮ ಪುಟ್ಟ ಕಂದಮ್ಮ ಸಾವನ್ನಪ್ಪಿರುವ ದಾರುಳ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ಮಗು ಮೃತಪಟ್ಟ ವೇಳೆ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ‘ಸುಟ್ಟಗಾಯಗಳಿಂದ ನಂಜಾಗಿ ಮಗು ಸಾವನ್ನಪ್ಪಿದೆ’ ಎಂದು ತಿಳಿಸಿದ್ದಾರೆ. ಈ ಕುರಿತು ಮರಣೋತ್ತರ ಪರೀಕ್ಷೆಯ ವರದಿಯನ್ನೂ ನೀಡಿದ್ದಾರೆ. ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಶಾಂತ್ ಎಂಬುವವರು ನೀಡಿದ ದೂರಿನ ಮೇರೆಗೆ ಮಗುವಿನ ಸಾವಿನ ಕುರಿತು ಎಫ್‌ಐಆರ್ ದಾಖಲಾಗಿತ್ತು.

ಮೊದಲಿಗೆ 2024ರ ನವೆಂಬರ್‌ನಲ್ಲಿ ಮಗುವಿಗೆ ಅನಾರೋಗ್ಯ ಉಂಟಾಗಿತ್ತು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದರೂ, ಮಗುವಿನ ಕಾಯಿಲೆ ವಾಸಿಯಾಗಿರದ ಕಾರಣ, ಮಗುವಿಗೆ ಅಗರಬತ್ತಿ ಬೆಂಕಿಯಿಂದ ಬಿಸಿ ಮಾಡಿದರೆ ಕಾಯಿಲೆ ವಾಸಿಯಾಗುತ್ತದೆ ಎಂದು ಯಾರೋ ಹೇಳಿದ್ದನ್ನು ಕೇಳಿದ ತಾಯಿ ಅದರ ಪ್ರಯೋಗ ಮಾಡಿದ್ದು, ಇದೀಗ ಮಗು ಸಾವಿಗೀಡಾಗಿದೆ. ಈ ಪ್ರಕರಣ ಕುರಿತು ಆರೋಪಿ ತಾಯಿಯ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular