Sunday, July 21, 2024
Homeಮೂಡುಬಿದಿರೆಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀ ಮಂಜೊಲು ಜುಮಾದಿ ದೈವದ ಭತ್ತದ ಕೃಷಿ ನಾಟಿಗೆ ಚಾಲನೆ

ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀ ಮಂಜೊಲು ಜುಮಾದಿ ದೈವದ ಭತ್ತದ ಕೃಷಿ ನಾಟಿಗೆ ಚಾಲನೆ

ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀ ಧೂಮಾವತೀ ದೈವದ ಪಾರಂಪರಿಕ ಜೋಡು ಬಂಡಿ ಪೂಕರೆ ಎಳೆಯುವ ಕಂಬಳದ ಗದ್ದೆಗೆ ಪಾರಂಪರಿಕ ನೆಲೆಯಲ್ಲಿ ಕಂಬಳದ ಗದ್ದೆಗೆ ಹಾಲು ಶಿಯಾಳ ಸಮರ್ಪಸಿ ದೈವದ ಪ್ರಸಾದವನ್ನು ಹಾಕಿ ಎನೆಲು ಭತ್ತದ ಕೃಷಿಗೆ ಪುತ್ತಿಗೆ ಗುತ್ತು ಕಡಂದಲೆ ಪರಾರಿ ಯಜಮಾನರಾದ ಕೆ. ಪಿ. ಸಂತೋಷ್ ಕುಮಾರ್ ಎಂ. ಶೆಟ್ಟಿಯವರು ಚಾಲನೆ ನೀಡಿದರು.

ಈ ಗದ್ದೆಯು ಪಾರಂಪರಿಕ ಹಿನ್ನಲೆಯನ್ನು ಹೊಂದಿದ್ದು ಈ ಗದ್ದೆಗೆ ಸೂತಕದವರು ಸ್ವ ಇಚ್ಛೆಯಿಂದ ಅದರ ಪಾವಿತ್ರತೆ ಕಾಪಾಡುವ ದ್ರಿಷ್ಟಿಯಿಂದ ಗದ್ದೆಗೆ ಇಳಿಯುದಿಲ್ಲ. ಈ ಗದ್ದೆಯಲ್ಲಿ ಎನೆಲು (ಕಾರ್ತಿ ಕೃಷಿ ) ಕೊಳಕೆ ಎಂಬ ಎರಡು ಬೆಳೆಯನ್ನು ಮಾಡಲಾಗುತ್ತದೆ. ಕೊಳಕೆ ಕೃಷಿಯನ್ನು ಫೆಬ್ರವರಿ ೫ರಂದು ಕಂಬಳೋತ್ಸವ ನಡೆದು ರಾತ್ರಿ ಜೋಡು ಬಂಡಿ ಪೂಕರೆ ಬಂದಿಯನ್ನು ಎಳೆದು ಕಟ್ಟೆಯಲ್ಲಿ ನಿಲ್ಲಿಸಲಾಗುವುದು. ಮರು ದಿವಸ ಫೆಬ್ರವರಿ 6ರಂದು ಬೆಳಿಗ್ಗೆ ಮಂಜೊಟ್ಟಿ ದೈವಸ್ಥಾನದಲ್ಲಿ ಶ್ರೀ ಉಳ್ಳಾಯ ದೈವದ ನೇಮೊತ್ಸವ ಪ್ರಾರಂಭವಾಗುವ ಮೊದಲು ಕಂಬಳ ಗದ್ದೆಗೆ ಊರ ಮಹಿಳೆಯರು ನಾಟಿ ಮಾಡುತ್ತಾರೆ.

ಈ ಸಂದರ್ಭದಲ್ಲಿ ದೈವವು ಮಂಜೊಟ್ಟಿ ದೈವಸ್ಥಾನದಿಂದ ನೇಮೊತ್ಸವದ ಮುಖಾಂತರ ದ್ರಷ್ಟಿ ಹಾಯಿಸುವುದು. ನೇಮೊತ್ಸವ ಮುಗಿಯುವ ಮೊದಲು ಎರಡು ಕಂಬಳ ಗದ್ದೆಯ ನಾಟಿಯನ್ನು ಮುಗಿಸಿ ಮಹಿಳೆಯರು ದೈವದ ಪ್ರಸಾದವನ್ನು ಸ್ವೀಕರಿಸುತ್ತಾರೆ. ಇದು ಪುರಾತನದಿಂದ ಬಂದ ಪದ್ದತಿ.

RELATED ARTICLES
- Advertisment -
Google search engine

Most Popular