ಪುತ್ತೂರು: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ 2024ನೇ ಸಾಲಿನ ಪೊಲೀಸ್ ಕರ್ತವ್ಯ ಕೂಟದಲ್ಲಿ ಆಂಟಿ ಸಬೋಟೇಜ್ ಚೆಕ್(ASC) ವಿಭಾಗದಲ್ಲಿ ಪಶ್ಚಿಮ ವಲಯ ಬಿ.ಡಿ.ಡಿ. ಎಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪುತ್ತೂರಿನ ತಾಲೂಕಿನ ಪಂಜಲ ನಿವಾಸಿಯಾಗಿರುವ ಜಯಂತ್ .ಬಿ
ಎ ಆರ್ ಎಸ್ ಐ ರವರು ಪ್ರಥಮ ಸ್ಥಾನವನ್ನು ಪಡೆದು ಜಾರ್ಖಂಡ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪೊಲೀಸ್ ಕರ್ತವ್ಯ ಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಈವರೆಗೆ ರಾಜ್ಯಮಟ್ಟದಲ್ಲಿ 3 ಸಲ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಸಾಧನೆ ಮಾಡಿ ಜಿಲ್ಲಾ ಪೊಲೀಸ್ ಗೆ ಕೀರ್ತಿ ತಂದಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಡಿ.ಎ.ಆರ್ ಘಟಕಕ್ಕೆ 2008 ರಲ್ಲಿ ಸೇರ್ಪಡೆಯಾಗಿ ಪ್ರಸ್ತುತ ಪಶ್ಚಿಮ ವಲಯ ಐಜಿಪಿ ಕಚೇರಿಯ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.