ಬೆಂಗಳೂರು: ಅಕ್ಟೋಬರ್ 19, 20 ರಂದು ನಡೆದ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು, ಇವರು ಆಯೋಜಿಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಆಯ್ಕೆ ಆಗಿದ್ದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಾದ ಕೀರ್ತನ್ ಶೆಟ್ಟಿ ಸುಳ್ಯ ಹಾಗೂ ಅಕ್ಷಯ ನವೀನ್ ಇವರು ರಾಜ್ಯದ ಕೇಂದ್ರ ಬಿಂದು ಬೆಂಗಳೂರಿನ ರಾಷ್ಟ್ರೋತಾನ ವಿದ್ಯಾಕೇಂದ್ರ ಥಣಿಸಂದ್ರ ಇಲ್ಲಿ ನಡೆದ ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ 130 ಜನರು ಭಾಗವಹಿಸಿದ ಸ್ಫರ್ಧೆಯಲ್ಲಿ ಕೀರ್ತನ್ ಶೆಟ್ಟಿ ಸುಳ್ಯ ಕನ್ನಡ ವಿಭಾಗದಲ್ಲಿ ದ್ವಿತೀಯ ಹಾಗೂ ಅಕ್ಷಯ ನವೀನ್ ಇಂಗ್ಲಿಷ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.