ಪುತ್ತೂರು: ಪುತ್ತೂರು ತುಳುಕೂಟದ ವತಿಯಿಂದ ಜರಗಲಿರುವ ತಾಲೂಕು ತುಳುವರ ಸಮ್ಮೇಳನ “ತುಳುವೆರೆ ಮೇಳೊ 2025” ಮತ್ತು ತುಳುಕೂಟದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದ ಪೂರ್ವಭಾವಿ ಸಾರ್ವಜನಿಕ ಸಭೆಯು ದಶಂಬರ 25 ಬುಧವಾರ ಬೆಳಗ್ಗೆ 10.30 ರಿಂದ ಪುತ್ತೂರಿನ ಮಂಜಲ್ಪಡ್ಪು ಸುದಾನ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಜರಗಲಿದೆ.
ಹಿಂದಿನ ಸಮ್ಮೇಳನ ಸಮಿತಿಗಳ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ, ಅಧ್ಯಕ್ಷರುಗಳಾಗಿದ್ದ ಕಾವು ಹೇಮನಾಥ ಶೆಟ್ಟಿ ಮತ್ತು ರೆ. ವಿಜಯ ಹಾರ್ವಿನ್, ಉದ್ಯಮಿ ಬಲರಾಮ ಆಚಾರ್ಯ, ಪ್ರೊ. ದತ್ತಾತ್ರೇಯ ರಾವ್ ಇತ್ಯಾದಿ ಗಣ್ಯರು ಉಪಸ್ಥಿತರಿರಲಿದ್ದಾರೆ.
ತುಳು ಭಾಷೆ ಮತ್ತು ಸಂಸ್ಕೃತಿಯ ಅಭಿಮಾನಿಗಳು ಭಾಗವಹಿಸಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಪುತ್ತೂರು ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಹಾಗೂ ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ ವಿನಂತಿಸಿದ್ದಾರೆ.