ಉಪ್ಪಿನಂಗಡಿ : ಪುತ್ತೂರು- ಉಪ್ಪಿನಂಗಡಿ ನಡುವಣದ ರಸ್ತೆಯ ವಿಸ್ತರಣೆ ಬಿರುಸಿನಿಂದ ನಡೆಯುತ್ತಿದ್ದು, 34ನೇ ನೆಕ್ಕಿಲಾಡಿ-ಬೊಳುವಾರು ರಾಜ್ಯ ಹೆದ್ದಾರಿಯ ಆದರ್ಶನಗರದಲ್ಲಿ ಭಜನ ಮಂದಿರಕ್ಕೆ ಹೋಗುವ ರಸ್ತೆಯ ಪಾರ್ಶ್ವದಲ್ಲಿ ನಿರ್ಮಿಸಿರುವ 15 ಅಡಿ ಎತ್ತರದ ಕಾಂಕ್ರೀಟ್ ತಡೆಗೋಡೆ ಕುಸಿದು ಬಿದ್ದಿದೆ.
ಭಾರೀ ಮಳೆಗೆ ತಡೆಗೋಡೆಯ ಅರ್ಧ ಭಾಗ ಧರಾಶಾಯಿಯಾಗಿದೆ. ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಇಂಜಿನಿಯರ್‌ಗಳನ್ನು ಸ್ಥಳಕ್ಕೆ ಕರೆಯಿಸಿ ತರಾಟೆಗೆ ತೆಗೆದುಕೊಂಡರಲ್ಲದೆ, ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಡೆಸುವಂತೆ ಸೂಚಿಸಿದರು.