ಪುತ್ತೂರು :ಶ್ರೀ ಕ್ರಷ್ಣ ಯುವಕ ಮಂಡಲ(ರಿ) ಸಿಟಿಗುಡ್ಡೆ ನೆಹರು ನಗರ ಪುತ್ತೂರು ವಾಯ್ಸ್ ಆಫ್ ಆರಾಧನ ಸಂಭ್ರಮ ಆರದಿರಲಿ ಬದುಕು ಆರಾಧನಾ ತಂಡದ ಕಾರ್ಯಕ್ರಮ ನವೆಂಬರ್‌ 20 ರಂದು ಭಾನುವಾರ ಬ್ರಹ್ಮಶ್ರೀ ಸಮುದಾಯ ಭವನ ಪುತ್ತೂರಿನಲ್ಲಿ ಮಾಜಿ ಶಾಸಕಿ ಶ್ರೀಮತಿ ಶಂಕುಂತಳ ಶೆಟ್ಟಿ ಅವರು ಕಾರ್ಯಕ್ರಮ ವನ್ನು ಉದ್ಗಾಟಿಸಿ ಗ್ರಾಮೀಣ ಪ್ರತಿಭೆ ಗಳಿಗೆ ವಾಯ್ಸ್ ಆಫ್ ಆರಾಧನ ವೇದಿಕೆ ಆಗಿದೆ ಹಾಗು ಅನಾರೋಗ್ಯ ಪೀಡಿತ ರಿಗೆ ರಕ್ತದಾನಿಗಳಿಗೆ ಪ್ರತಿ ತಿಂಗಳು ಸಹಾಯ ನೀಡುವ ಶ್ರೀಕ್ರಷ್ಣ ಯುವಕ ಮಂಡಲ ಹಾಗು ಆರದಿರಲಿ ಬದುಕು ಆರಾಧನ ತಂಡದ ಕಾರ್ಯವನ್ನು ಶ್ಲಾಘಿಸಿದರು.

ವಾಯ್ಸ್ ಆಫ್ ಆರಾಧನ ಸಂಚಾಲಕಿ ಪದ್ಮಶ್ರೀ ಭಟ್ ನಿಡ್ಡೋಡಿ ಪ್ರಾಸ್ತಾವಿಕ ನುಡಿ ಗೈದರು. ಆರ್ಯ ಭಟ ಪ್ರಶಸ್ತಿ ವಿಜೇತ ರಾದ ಜಾನಪದ ಕಲಾವಿದರಾದ ಉದಯ ಕುಮಾರ್ ಲಾಯಿಲ ಅವರು ಅಧ್ಯಕ್ಷೀಯ ನೆಲೆಯಲ್ಲಿ ಪ್ರತಿಭೆಗಳು ಜಗದಲ ಬೆಳೆಯ ಬೇಕು ಜಾನಪದ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಕಿವಿ ಮಾತು ನುಡಿದರು ಮುಖ್ಯ ಅಥಿತಿಗಳಾದ ಮಂಜುನಾಥ ಆಗ್ರೂ ಕೇರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆದ ವಿಶ್ವನಾಥ ಪೂಜಾರಿ ಅವರು ವಾಯ್ಸ್ ಆಫ್ ಆರಾಧನ ಪ್ರತಿಭೆ ಗಳಿಗೆ ವೇದಿಕೆ ಆಗಿದೆ ತನ್ನ ಮಗಳ ಪ್ರತಿಭೆ ಬೆಳೆಯಲು ವಾಯ್ಸ್ ಆಫ್ ಆರಾಧನ ಸಹಕಾರಿ ಆಗಿದೆ ಈಗ ಟಿ.ವಿ ಶೂ ನಲ್ಲಿ ಧಾರವಾಹಿ ಚಲನಚಿತ್ರಗಳಲ್ಲಿ ನಟಿಸುತ್ತಿರುವ ತನ್ನ ಮಗಳನ್ನು ನೆನಪು ಮಾಡಿ ಕೊಂಡರು . ಹೇಮನಾಥ ಶೆಟ್ಟಿ ಕಾವು ಕಾರ್ಯಕ್ರಮ ದ ಬಗ್ಗೆ ಸಂತಸ ವೆಕ್ತಪಡಿಸಿದರು . ಹಾಗು ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಂ.ಬಿ ವಿಶ್ವನಾಥ .ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ದಿವ್ಯ ಪ್ರಭ ಗೌಡ ಚಿಲ್ತಡ್ಕ ಮಾತಾಡಿ ಶುಭ ಹಾರೈಸಿದರು ಶ್ರೀ ಕ್ರಷ್ಣ ಯುವಕ ಮಂಡಲ ದ ವತಿಂದ ವಾಯ್ಸ್ ಆಫ್ ಆರಾಧನ ದ ಪದ್ಮಶ್ರೀ ಭಟ್ ಹಾಗು ಆರಾಧನಾ ಭಟ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಆಮಂತ್ರಣ ಪರಿವಾರದ ವಿಜಯಕುಮಾರ್ ಜೈನ್ ಶ್ರೀಕ್ರಷ್ಣ ಯುವಕ ಮಂಡಲದ ಸಂತೋಷ್ ಕುಮಾರ್. ಅಧ್ಯಕ್ಷರಾದ ಬಿ.ರಾಜೀವ ಗೌಡ. ಕಲಾವಿದರಾದ ಕ್ರಷ್ಣಪ್ಪ ನವೀನ್ ಪುತ್ತೂರು ಅಭಿಷೇಕ್ ಶೆಟ್ಟಿ ಐಕಳ ಪ್ರಸಾದ್ ನಾಯಕ್ ಉಡುಪಿ . ಮಜಾಭಾರತ ಖ್ಯಾತಿ ಯ ಆರಾಧನ ಭಟ್ ಪ್ರೀಯಾ ಸುಳ್ಯ ಶಾಂತಾ ಪುತ್ತೂರು ಅರುಣ್ ಅಜೆಕಾರು . ಕಲಾ ಪೋಷಕರಾದ ಧನರಾಜ್ ಆಚಾರ್ಯ ಪ್ರಕಾಶ್ ಆಚಾರ್ಯ ಉಪಸ್ಥಿತಿ ತರಿದ್ದರು ಸಂತೋಷ್ ಅವರು ಸ್ವಾಗತಿಸಿ ಧನ್ಯವಾದ ವಿತ್ತರು ಕುಮಾರಿ ಅಪೂರ್ವ ಕಾರಂತ ಅವರು ನಿರೂಪಿಸಿದರು ವಾಯ್ಸ್ ಆಫ್ ಆರಾಧನ ಪ್ರತಿಭೆ ಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿ ಆಗಿ ನಡೆಯಿತು

Leave a Reply

Your email address will not be published. Required fields are marked *