ಪುತ್ತೂರು : ಬಡಗನ್ನೂರು ಗ್ರಾಮದ ತಲೆಂಜಿ ಸಾಮಾಜಿಕ ಗೇರು ನೆಡುತೋಪು ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದು ವ್ಯಕ್ತಿ ಒಬ್ಬರು ಅತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡವರು ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ಯೋಗೀಶ್ ಭಂಡಾರಿ ಎಂದು ತಿಳಿದು ಬಂದಿದೆ. ಇವರು ಕಿನ್ನಿಂಗಾರಿನಲ್ಲಿ ಸೆಲೂನ್ ಅಂಗಡಿ ಹೊಂದಿದ್ದರು. ವ್ಯಕ್ತಿಯೊಬ್ಬರು ಬೆಳಗಿನ ಜಾವ ಹಾಲು ಕೊಂಡೊಯ್ಯುವ ವೇಳೆ ಪಕ್ಕದ ಕಾಡಿನಿಂದ ಮೊಬೈಲ್ ರಿಂಗ್ ಅಗುವ ಶಬ್ದ ಕೇಳಿ ಅದನ್ನು ಆಳಿಸಿಕೊಂಡು ಆ ಸ್ಥಳಕ್ಕೆ ತೆರಳಿದಾಗ ಯೋಗೀಶ್ ಭಂಡಾರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಮೃತರು ಪತ್ನಿ ನಳಿನಿ, ಮಕ್ಕಳು, ಸಹೋದರರನ್ನು ಅಗಲಿದ್ದಾರೆ. ಸ್ಥಳಕ್ಕೆ ಸಂಪ್ಯ ಪೊಲೀಸ್ ಆಗಮಿಸಿ ಪರಿಶೀಲಿಸಿ, ದೂರು ದಾಖಲಿಸಿಕೊಂಡಿದ್ದಾರೆ.