ಲಾಹೋರ್: ಕುರಾನ್ ಅಪವಿತ್ರಗೊಳಿಸಿದ್ದಾರೆ ಎನ್ನುವ ಆರೋಪದಡಿ ಇಸ್ಲಾಮಿಸ್ಟ್ ತೆಹ್ರೀಕ್ ಎ ಲಬ್ಬೈಕ್ ಪಾಕಿಸ್ತಾನ್ ಗುಂಪು ಕ್ರೈಸ್ತ ವೃದ್ಧರೊಬ್ಬರ ಮೇಲೆ ನಡೆಸಿದ ಮಾರಣಾಂತಿಕ ದಾಳಿಯಿಂದ ಅವರು ಮೃತಪಟ್ಟಿದ್ದಾರೆ ಎಂದು ವರದಿಗಳಾಗಿವೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ.
ಗುಂಪಿನ ಹಲ್ಲೆಯಿಂದ ಗಂಭೀರ ಗಾಯಗೊಂಡು ವೃದ್ಧ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಧರ್ಮ ನಿಂದನೆಯ ಕೃತ್ಯಗಳ ಆರೋಪ ಹೊತ್ತಿರುವ ವ್ಯಕ್ತಿಗಳ ಮೇಲೆ ಪಾಕಿಸ್ತಾನದಲ್ಲಿ ಇಂತದ ದಾಳಿಗಳು ಆಗಾಗ್ಗೆ ನಡೆಯುತ್ತಿದ್ದು, ದುಷ್ಕರ್ಮಿಗಳು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.
ಪಾಕಿಸ್ತಾನದ ಪಂಜಾಬ್‌ನ ಸರ್ಗೋಧಾ ಜಿಲ್ಲೆಯ ಮುಜಾಹಿದ್ ಕಾಲೊನಿಯಲ್ಲಿ ಈ ಘಟನೆ ನಡೆದಿದೆ. ಇತರ ಕ್ರೈಸ್ತರ ಮೇಲೂ ದಾಳಿ ನಡೆದಿದೆ. ಇಬ್ಬರು ಕ್ರಿಶ್ಚಿಯನ್ನರು ಮತ್ತು 10 ಮಂದಿ ಪೊಲೀಸರಿಗೆ ಗಾಯಗಳಾಗಿವೆ. ಕ್ರೈಸ್ತರಿಗೆ ಸೇರಿದ ಆಸ್ತಿಗಳನ್ನು ದೋಚಲಾಗಿದೆ ಎಂದೂ ವರದಿಗಳು ತಿಳಿಸಿವೆ.
ಕುರಾನ್ ಅಪವಿತ್ರಗೊಳಿಸಿದ ಆರೋಪ: ಗುಂಪಿನಿಂದ ವೃದ್ಧನ ಮೇಲೆ ದಾಳಿ; ಸಾವು
RELATED ARTICLES