ಮೂಡುಬಿದಿರೆ: ಪಶುಸಂಗೋಪನೆ ಇಲಾಖೆ ಮೂಡುಬಿದಿರೆ ಇವರ ಸಹಯೋಗದೊಂದಿಗೆ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಯಿಗಳಿಗೆ ಹುಚ್ಚು ನಾಯಿ ನಿರೋಧಕ ಲಸಿಕೆ (ರೇಬಿಸ್ ವ್ಯಾಕ್ಸಿನ್) ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸೆ.12ರಂದು ಬೆಳಿಗ್ಗೆ 10.30ರಿಂದ 11ರವರೆಗೆ ಪಾಲಡ್ಕ ಮಾವಿನಕಟ್ಟೆ ಬಸ್ಸು ನಿಲ್ದಾಣದ ಬಳಿ, 11ರಿಂದ 11.30ರವರೆಗೆ ಕಡಂದಲೆ ಪೂಪಾಡಿಕಲ್ಲು ಪಿಎಫ್‌ಸಿ ಮೈದಾನದ ಬಳಿ, 11.30ರಿಂದ 12 ಗಂಟೆವರೆಗೆ ಕಡಂದಲೆ ಪಲ್ಕೆ ಜಂಕ್ಷನ್ ಬಳಿ ಶಿಬಿರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೆ.12ರಂದು ಪಶುಸಂಗೋಪನೆ ಇಲಾಖೆ ವತಿಯಿಂದ ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ನಾಯಿಗಳಿಗೆ ರೇಬಿಸ್ ವ್ಯಾಕ್ಸಿನ್ ಶಿಬಿರ
RELATED ARTICLES