ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ರನ್ನು ಇಂದು ನಟಿ ರಚಿತಾ ರಾಮ್ ಭೇಟಿಯಾಗಿದ್ದಾರೆ. ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಕ್ಷಿತಾ ರಾಮ್ ಭಾವುಕರಾದರು. ರಾಜನನ್ನು ರಾಜನ ರೀತಿ ನೋಡೋಕೆ ನನಗಿಷ್ಟ. ಈ ರೀತಿಯಲ್ಲಿ ನೋಡೋಕೆ ಕಷ್ಟ ಆಗುತ್ತೆ ಎಂದು ನಟಿ ರಚಿತಾ ರಾಮ್ ಭಾವುಕರಾದರು.
ನಾನು ಅವರ ಬ್ಯಾನರ್‌ನಿಂದಲೇ ಇಂಟ್ರಡ್ಯೂಸ್ ಆಗಿದ್ದು. ಅವರು ನನಗೆ ಅವಕಾಶ ಕೊಡದಿದ್ದರೆ, ಬಿಂದ್ಯಾ ರಚಿತಾ ರಾಮ್ ಆಗುತ್ತಿರಲಿಲ್ಲ. ಅವರನ್ನು ನೋಡಿದ ಕೂಡಲೇ ನಾವೆಲ್ಲಾ ಭಾವುಕರಾದ್ವಿ. ಅವರೇ ನಮಗೆ ಧೈರ್ಯ ಹೇಳಿದರು, ಸಮಾಧಾನ ಮಾಡಿದರು ಎಂದು ರಚಿತಾ ಹೇಳಿದರು.
ಕಾನೂನಿನಲ್ಲಿ ನಮಗೆ ನಂಬಿಕೆ ಇದೆ. ಆದಷ್ಟು ಬೇಗ ಹೊರಗೆ ಬರ್ತೀನಿ ಅಂತ ದರ್ಶನ್ ಹೇಳಿದ್ದಾರೆ ಅಂತ ರಚಿತಾ ರಾಮ್ ಮಾಧ್ಯಮಗಳಿಗೆ ತಿಳಿಸಿದರು. ಅದಕ್ಕೆ ನಾನು ನಿಮಗೋಸ್ಕರ ವೇಟ್ ಮಾಡ್ತಾ ಇದ್ದೀವಿ, ಬೇಗ ಬನ್ನಿ ಎಂದೆ. ಅವರನ್ನು ನೋಡಿದ ಮೇಲೆ ನನಗೆ ನಿರಾಳವಾಯ್ತು, ಆರೋಗ್ಯ ವಿಚಾರಿಸಿದಾಗ ಐ ಆ್ಯಮ್ ಫೈನ್ ಅಂದ್ರು ಎಂದು ರಚಿತಾ ರಾಮ್ ತಿಳಿಸಿದರು.
ಕಾನೂನು ಪ್ರಕ್ರಿಯೆ ಬಗ್ಗೆ ಅವರೇ ಮಾತನಾಡಬೇಕು, ನಾವೇನೇ ಮಾತಾಡಿದ್ರು ಅದು ತಪ್ಪಾಗುತ್ತೆ, ಅವರ ಋಣ ನಮ್ಮ ಕುಟುಂಬದ ಮೇಲಿದೆ, ಆದಷ್ಟು ಬೇಗ ನಮಗೆ ಒಳ್ಳೆಯ ಸುದ್ದಿ ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ತೀನಿ ಎಂದು ರಚಿತಾ ರಾಮ್ ಹೇಳಿದರು.
ರಾಜನನ್ನು ರಾಜನ ರೀತಿ ನೋಡೋಕೆ ಇಷ್ಟ: ಜೈಲಲ್ಲಿ ದರ್ಶನ್ ಭೇಟಿ ಬಳಿಕ ಭಾವುಕರಾದ ನಟಿ ರಚಿತಾ ರಾಮ್
RELATED ARTICLES