ರೇಡಿಯೊ ಮಣಿಪಾಲ್ ಮತ್ತು ಕ.ಸ.ಪ ಉಡುಪಿ ಜಿಲ್ಲೆ ,ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ‘ಕಥೆ ಕೇಳೋಣ’ ಸರಣಿ ಕಾರ್ಯಕ್ರಮ ಮೂಡಿಬರುತ್ತಿದ್ದು ಜನಮೆಚ್ಚುಗೆಗೆ ಮಾತ್ರವಲ್ಲದೆ ಸಮುದಾಯದ ಪಾಲ್ಗೊಳ್ಳುವಿಕೆಗೆ ಪಾತ್ರವಾಗಿದೆ.ಸಮುದಾಯ ಬಾನುಲಿ ಪರಿಕಲ್ಪನೆಯಂತೆ ರೇಡಿಯೊ ಮಣಿಪಾಲ್ ಕಾರ್ಯನಿರ್ವಹಿಸುತ್ತಿದ್ದು ಸಮುದಾಯದಿಂದ ಸಮುದಾಯಕ್ಕೆ ಸಮರ್ಪಿತವಾಗುವ ಕಾರ್ಯಕ್ರಮಗಳಿಂದ ಸಮಾಜದ ಅಭಿವೃದ್ಧಿ ಸಾಧ್ಯ.ಈ ಪರಿಕಲ್ಪನೆಯಂತೆ ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಒಗ್ಗೂಡುವಿಕೆಯಲ್ಲಿ ರೇಡಿಯೊ ಕೇಳುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಅರ್ಹ ಫಲಾನುಭವಿಗಳಿಗೆ ರೇಡಿಯೊ ವಿತರಣಾ ಅಭಿಯಾನ ಜನವರಿ 4ರಂದು ಮಣಿಪಾಲ್ ಎಂ.ಐ.ಸಿ ಕ್ಯಾಂಪಸ್ ನಲ್ಲಿ ಪ್ರಾರಂಭಗೊಂಡಿತು. ಫಲಾನುಭವಿಗಳಾಗಿ ಮೂಡುಅಲೆವೂರಿನ ಬೇಬಿಲೀಲಾ ಮತ್ತು ದೃಷ್ಟಿ ಸಮಸ್ಯೆಹೊಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ ಪಾವನ ರೇಡಿಯೊ ಸ್ವೀಕರಿಸಿದರು. ಮೂಲತಃ ಉಡುಪಿಯ ಮಟ್ಟು ಗ್ರಾಮದವರಾದ ಮಾಹೆ ಎಂ.ಐ.ಟಿ ಹಳೇವಿದ್ಯಾರ್ಥಿ ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿರುವ ಸಾಫ್ಟ್ವೇರ್ ಇಂಜಿನಿಯರ್ ಪ್ರಶಾಂತ ಕುಮಾರ್ ಮಟ್ಟು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಮಣಿಪಾಲ್ ಇನಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ನ ನಿರ್ದೇಶಕರಾದ ಡಾ.ಪದ್ಮಾರಾಣಿ , ಕ.ಸಾ.ಪ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಹೆಚ್.ಪಿ, ಪ್ರಧಾನ ಕಾರ್ಯದರ್ಶಿ ಜನಾರ್ದನ ಕೊಡವೂರು, ಸಂಘಟನಾ ಕಾರ್ಯದರ್ಶಿ ಸತೀಶ್ ಕೊಡವೂರು, ಮೋಹನ್ ಹಂದಾಡಿ,ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಮತ್ತು ರೇಡಿಯೊ ಮಣಿಪಾಲ್ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ರಶ್ಮಿ ಅಮ್ಮೆಂಬಳ ಉಪಸ್ಥಿತರಿದ್ದರು. ಎಂ.ಐ.ಸಿ ಸಿಬ್ಬಂದಿ ಸದಾನಂದ್ ಸಹಕರಿಸಿ ದರು.