ಖ್ಯಾತ ಕ್ರಿಕೆಟ್ ಆಟಗಾರ ರಘುರಾಮ. ಭಟ್ ಅವರು ಸುರತ್ಕಲ್ ನಲ್ಲಿರುವ ಅಗರಿ ಎಂಟರ್ ಪ್ರೈಸಸ್ ಸಂಸ್ಥೆಗೆ ಭೇಟಿ ನೀಡಿದರು. ರಘುರಾಮ ಭಟ್ ಅವರು ಎರಡು ಟೆಸ್ಟ್ ಪಂದ್ಯ ಮತ್ತು ನೂರಕ್ಕು ಮಿಕ್ಕಿ ರಣಜಿ ಪಂದ್ಯವನ್ನು ಆಡಿದ್ದರು. ಟೆಸ್ಟ್ ನಲ್ಲಿ ನಾಲ್ಕು ವಿಕೆಟ್ ಪಡೆದಿದ್ದ ಅವರು ರಣಜಿಯಲ್ಲಿ 375 ವಿಕೆಟ್ ಪಡೆದಿದ್ದರು. ಅವರನ್ನು ಅಗರಿ ರಾಘವೇಂದ್ರ ರಾವ್ ಸ್ವಾಗತಿಸಿ ಸನ್ಮಾನಿಸಿದರು.
ಕುಸ್ತಿಪಟು, ಕ್ರಿಕೆಟ್ ಆಟಗಾರ ಪುಂಡಲೀಕ ಹೊಸಬೆಟ್ಟು, ಪತ್ರಕರ್ತ ರಜನ್ ಕುಮಾರ್ ಕೆ, ಯುವ ಚೇತನ ಹೊಸಬೆಟ್ಟು ಇದರ ಪದಾಧಿಕಾರಿಗಳು, ಸಂಸ್ಥೆಯಲ್ಲಿರುವ ಕ್ರಿಕೆಟ್ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.